ಬಂಟ್ವಾಳ, ಅಕ್ಟೋಬರ್ 15, 2025 (ಕರಾವಳಿ ಟೈಮ್ಸ್) : ಇಲ್ಲಿನ ಗಿರಿಗುಡ್ಡೆಯಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿರುವ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯಕ್ಕೆ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರು ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಹಾಸ್ಟೆಲ್ ವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ತಹಶೀಲ್ದಾರರು ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಆಹಾರದ ಗುಣಮಟ್ಟದ ಕುರಿತಾಗಿಯು, ನಿಗದಿಯಂತೆ ಆಹಾರಗಳನ್ನು ಪೂರೈಸಲಾಗುತ್ತಿದೆಯಾ ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ವಿದ್ಯಾರ್ಥಿಗಳ ಆಹಾರ ಹಾಗೂ ಇತರೆ ವಸ್ತುಗಳ ದಾಸ್ತಾನು ಕೊಠಡಿಗೂ ಭೇಟಿ ನೀಡಿ ಅಲ್ಲಿನ ಸ್ವಚ್ಚತೆ ಬಗ್ಗೆ ಪರಿಶೀಲಿಸಿದರು.
ಕಂದಾಯ ನಿರೀಕ್ಷಕ ಜೆ ಜನಾರ್ದನ, ಬಂಟ್ವಾಳ ಕಸ್ಬಾ ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್, ಪಾಲಿಟೆಕ್ನಿಕ್ ಪ್ರಾಂಶುಪಾಲ ನರಸಿಂಹ ಭಟ್ ಎಚ್, ಸೂಪರಿಡೆಂಟ್ ಸುಧಾಕರ್ ಸಿ ಎಸ್, ಪ್ರಥಮ ದರ್ಜೆ ಸಹಾಯಕ ಹಮೀದ್, ಕಂಪ್ಯೂಟರ್ ಸೈನ್ಸ್ ವಿಭಾಗದ ಭುವನೇಶ್ವರಿ, ಅತಿಥಿ ಉಪನ್ಯಾಸಕಿ ಜಾರ್ಜ್ ಜಾನಿ ಈ ಸಂದರ್ಭ ಜೊತೆಗಿದ್ದರು.















0 comments:
Post a Comment