ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವಿಟ್ಲ ಪೊಲೀಸರ ದಾಳಿ : ಓರ್ವ ಸೆರೆ, 7 ಮಂದಿ ಪರಾರಿ - Karavali Times ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವಿಟ್ಲ ಪೊಲೀಸರ ದಾಳಿ : ಓರ್ವ ಸೆರೆ, 7 ಮಂದಿ ಪರಾರಿ - Karavali Times

728x90

30 October 2025

ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವಿಟ್ಲ ಪೊಲೀಸರ ದಾಳಿ : ಓರ್ವ ಸೆರೆ, 7 ಮಂದಿ ಪರಾರಿ

ಬಂಟ್ವಾಳ, ಅಕ್ಟೋಬರ್ 30, 2025 (ಕರಾವಳಿ ಟೈಮ್ಸ್) : ಅಕ್ರಮ ಕೋಳಿ ಅಂಕ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಸೊತ್ತುಗಳ ಸಹಿತ ಓರ್ವನನ್ನು ಬಂಧಿಸಿದ ಘಟನೆ ಮಿತ್ತೂರು-ಮೀನಾವು ರಸ್ತೆಯ ಕೊಪ್ಪರಿಗೆ ಕ್ರಾಸ್ ಎಂಬಲ್ಲಿನ ಸಾರ್ವಜನಿಕ ಆಟದ ಮೈದಾನದಲ್ಲಿ ಅ 27 ರಂದು ನಡೆದಿದೆ. 

ಆರೋಪಿಗಳ ಪೈಕಿ ಎಂ ಮೋಹನ (57) ಎಂಬಾತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಇತರ 7 ಮಂದಿ ಆರೋಪಿಗಳಾದ ವಾಸಪ್ಪಗೌಡ, ದಿನೇಶ ಗೌಡ, ಮುರುವಪ್ಪ, ದಾಮೋದರ, ಜಿನ್ನಪ್ಪಗೌಡ, ಜನಾರ್ದನ ಗೌಡ ಹಾಗೂ ಚೇತನ ಎಂಬವರು ಓಡಿ ಹೋಗಿದ್ದಾರೆ. 

ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪೊಲೀಸರು 3 ಸಾವಿರ ರೂಪಾಯಿ ಮೌಲ್ಯದ 4 ಹುಂಜಗಳು, ಕೃತ್ಯಕ್ಕೆ ಬಳಸಿದ್ದ ಸುಮಾರು 1500/- ರೂಪಾಯಿ ಮೌಲ್ಯದ 8 ಕೋಳಿ ಬಾಳುಗಳು, 200 ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವಿಟ್ಲ ಪೊಲೀಸರ ದಾಳಿ : ಓರ್ವ ಸೆರೆ, 7 ಮಂದಿ ಪರಾರಿ Rating: 5 Reviewed By: karavali Times
Scroll to Top