ಬಂಟ್ವಾಳ, ಅಕ್ಟೋಬರ್ 20, 2025 (ಕರಾವಳಿ ಟೈಮ್ಸ್) : ಕೊಲೆ ಆರೋಪಿ ಭರತ್ ಕುಮ್ಡೇಲು ಬಗ್ಗೆ ಸಾಮಾಜಿಕ ಜಾಲ ತಾಣವಾದ ಫೇಸ್ ಬುಕ್ಕಿನಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದ ವ್ಯಕ್ತಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣವಾದ ಪೇಸ್ ಬುಕ್ಕಿನಲ್ಲಿ “ನಝೀರ್ ಮಂಗಳೂರ್” ಎಂಬ ಖಾತೆಯನ್ನು ಹೊಂದಿರುವ ವ್ಯಕ್ತಿಯು, ತನ್ನ ಪೇಸ್ ಬುಕ್ ಖಾತೆಯಲ್ಲಿ, ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದ ಆರೋಪಿ ಭರತ್ ಕುಮ್ಡೇಲ್ ಎಂಬಾತನ ಬಂಧನದ ಬಗ್ಗೆ ಉಲ್ಲೇಖಿಸುತ್ತಾ, ಭರತ್ ಕುಮ್ಡೇಲುನನ್ನು ಕೊಲೆ ಮಾಡಲು ಒಂದು ಸಮುದಾಯವನ್ನು ಪ್ರಚೋದಿಸುವಂತಹ ಹಾಗೂ ಅಪರಾಧ ಎಸಗಲು ಜನರಿಗೆ ದುಷ್ಪ್ರೇರಣೆಯನ್ನು ನೀಡುವ ಸಂದೇಶವನ್ನು ಪ್ರಸಾರ ಮಾಡಿರುವುದು ಅ 18 ರಂದು ಕಂಡುಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 156/2025, ಕಲಂ 57 ಆರ್/ಡಬ್ಲ್ಯು 103 ಬಿ ಎನ್ ಎಸ್ ಪ್ರಕಾರ ಸುಮೋಟೊ ಪ್ರಕರಣ ದಾಖಲಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
























0 comments:
Post a Comment