ಬಂಟ್ವಾಳ, ನವೆಂಬರ್ 20, 2025 (ಕರಾವಳಿ ಟೈಮ್ಸ್) : ಸೊಪ್ಪು ಕಡಿಯುವ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಅಲ್ಲಿಪಾದೆ ಉಜಿರಾಡಿ ಘಾಟಿ ಎಂಬಲ್ಲಿ ಎಂಬಲ್ಲಿ ನ 19 ರಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ರುಕ್ಮಯ್ಯ (65) ಎಂದು ಹೆಸರಿಸಲಾಗಿದೆ. ಇವರು ಪತ್ನಿಯ ನಿಧನ ನಂತರ ಮಕ್ಕಳಿಲ್ಲದೆ ಇದ್ದುದರಿಂದ ತಂಗಿ ಚಂದ್ರಾವತಿ ಎಂಬವರ ಮನೆಯಾದ ಸರಪಾಡಿ ಗ್ರಾಮ ಅಲ್ಲಿಪಾದೆ ಭಜನಾ ಮಂದಿರ ಬಳಿ ಸುಮಾರು ಕಳೆದ 24 ವರ್ಷಗಳಿಂದ ವಾಸವಾಗಿದ್ದರು. ಇವರು ನವೆಂಬರ್ 19 ರಂದು ಬೆಳಿಗ್ಗೆ 8.30 ರ ಸಮಯಕ್ಕೆ ಅಲ್ಲಿಪಾದೆ ಉಜಿರಾಡಿ ಘಾಟಿ ವಾಮನ ಪೂಜಾರಿ ಅವರ ಮನೆಯಲ್ಲಿ ಸೊಪ್ಪು ಕಡಿಯವ ಕೆಲಸದ ಸಂದರ್ಭ ಬೆಳಿಗ್ಗೆ ಸುಮಾರು 11.15ರ ವೇಳೆಗೆ ಅಲ್ಲೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇವರ ತಮ್ಮ ಸಂಗಬೆಟ್ಟು ಗ್ರಾಮದ ಗಾಡಿಪಲ್ಕೆ, ಪಳ್ಳೆದಕಾಡು ನಿವಾಸಿ ಪೂವಪ್ಪ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.














0 comments:
Post a Comment