ಬಂಟ್ವಾಳ, ನವೆಂಬರ್ 20, 2025 (ಕರಾವಳಿ ಟೈಮ್ಸ್) : ತೆಂಗಿನ ಮರದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಾಳ್ತಿಲ ಗ್ರಾಮದಲ್ಲಿ ನ 19 ರಂದು ನಡೆದಿದೆ.
ಮೃತರನ್ನು ಬಾಳ್ತಿಲ ಗ್ರಾಮದ ಕಲ್ಲಡ್ಕ ಸಮೀಪದ ಐಯ್ಯದಕೋಡಿ ನಿವಾಸಿ ಗೋಪಾಲಕೃಷ್ಣ ಪ್ರಭು (56) ಎಂದು ಹೆಸರಿಸಲಾಗಿದೆ. ಇವರು ನ 5 ರಂಧು ಬೆಳಿಗ್ಗೆ ಮನೆ ಹತ್ತಿರದ ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ಕೀಳುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು, ಸೊಂಟಕ್ಕೆ ಬಲವಾದ ಏಟು ಬಿದ್ದಿತ್ತು. ತಕ್ಷಣ ಅವರನ್ನು ಅವರ ಪತ್ನಿ ಮಾಯಾ ಪ್ರಭು ಹಾಗೂ ಸಂಬಂಧಿಕರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬೆನ್ನು ಮೂಳೆ, ಕೈ ಕಾಲು, ಸೊಂಟ ಹಾಗೂ ಶ್ವಾಸಕೋಶಕ್ಕೆ ತೀವ್ರ ಗಾಯಗಳಾಗಿ ಕಿಡ್ನಿಗಳು ಡ್ಯಾಮೇಜ್ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ನ 19 ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಪುತ್ರ ಪ್ರಭು ದಾಮೋದರ ಗೋಪಾಲ್ ಮಾಯ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.














0 comments:
Post a Comment