2020ರಲ್ಲಿ ನಡೆದ ಮೂಡಬಿದ್ರೆ ಆಳ್ವಾಸ್ ಕ್ಯಾಂಟೀನ್ ಸಿಬ್ಬಂದಿ ಚೇತನ್ ಎಂಬಾತನ ಕೊಲೆ ಆರೋಪಿ ಚಿದಾನಂದಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ - Karavali Times 2020ರಲ್ಲಿ ನಡೆದ ಮೂಡಬಿದ್ರೆ ಆಳ್ವಾಸ್ ಕ್ಯಾಂಟೀನ್ ಸಿಬ್ಬಂದಿ ಚೇತನ್ ಎಂಬಾತನ ಕೊಲೆ ಆರೋಪಿ ಚಿದಾನಂದಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ - Karavali Times

728x90

13 November 2025

2020ರಲ್ಲಿ ನಡೆದ ಮೂಡಬಿದ್ರೆ ಆಳ್ವಾಸ್ ಕ್ಯಾಂಟೀನ್ ಸಿಬ್ಬಂದಿ ಚೇತನ್ ಎಂಬಾತನ ಕೊಲೆ ಆರೋಪಿ ಚಿದಾನಂದಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮೂಡಬಿದ್ರೆ, ನವೆಂಬರ್ 13, 2025 (ಕರಾವಳಿ ಟೈಮ್ಸ್) : ಇಲ್ಲಿನ ಠಾಣಾ ವ್ಯಾಪ್ತಿಯ ಆಳ್ವಾಸ್ ಕಾಲೇಜು ಕ್ಯಾಂಟೀನ್ ಕಾರ್ಮಿಕ ಚೇತನ ಎಂಬಾತನನ್ನು 2020 ರ ಅಕ್ಟೋರ್ 30 ರಂದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿ ಚಿದಾನಂದ ಪರಶು ನಾಯ್ಕರ್ ಎಂಬಾತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. 

2020 ರ ಅಕ್ಟೋಬರ್ 30 ರಂದು ಕಾರ್ಕಳ ತಾಲೂಕು, ಬೇಲಾಡಿ, ಕಾಂತವಾರ ಗ್ರಾಮದ ದೊಡ್ಡಜೆ ನಿವಾಸಿ ರಾಜೇಶ್ ಪೂಜಾರಿ (42) ಎಂಬವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇವರು ಆಳ್ವಾಸ್ ಕ್ಯಾಂಟೀನಿನಲ್ಲಿ ಕೆಲಸ ಮಾಡಿಕೊಂಡಿದ್ದು, ಇವರ ಜೊತೆಗೆ ಕೆಲಸ ಮಾಡಿಕೊಂಡಿದ್ದ ಚೇತನ್ (22) ಮತ್ತು ಚಿದಾನಂದ ಎಂಬವರುಗಳಿಗೆ ಕ್ಯಾಂಟೀನಿನಲ್ಲಿ ಕೆಲಸದ ವಿಚಾರದಲ್ಲಿ ಮತ್ತು ವೈಯುಕ್ತಿಕ ವಿಚಾರದಲ್ಲಿ ಪರಸ್ಪರ ತಕರಾರು ನಡೆದಿದ್ದು, ಆರೋಪಿ ಚಿದಾನಂದನು 2020 ರ ಅಕ್ಟೋಬರ್ 30 ರಂದು ರಾತ್ರಿ ಸುಮಾರು 12.45 ರ ವೇಳೆಗೆ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಸಿಬ್ಬಂದಿಗಳ ವಿಶ್ರಾಂತಿ ಕೊಠಡಿಗೆ ಅP್ರÀಮ ¥್ರÀವೇಶ ಮಾಡಿ ರೂಮಿನಲ್ಲಿ ಮಲಗಿದ್ದ, ಚೇತನನನ್ನುದ್ದೇಶಿಸಿ ಬೇವರ್ಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೈದು, ಚೇತನ್ ನನ್ನು ಕೊಲೆ ಮಾಡುವ ಉದ್ದೇಶದಿಂದ ಚಿದಾನಂದನು ಆತನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಮಲಗಿದ್ದ ಚೇತನನ ತಲೆ ಭಾಗಕ್ಕೆ, ಮುಖಕ್ಕೆ ಹಲ್ಲೆ ನಡೆಸಿದ್ದಾನೆ. ರಾಜೇಶ ಮತ್ತು ಶಂಕರ್ ಅವರು ಚೇತನಗೆ ಹೊಡೆಯದಂತೆ ಹತ್ತಿರ ಹೋದಾಗ ಚಿದಾನಂದನು ಕಬ್ಬಿಣದ ರಾಡಿನಿಂದ ಮತ್ತೆ ಚೇತನನ ಮುಖಕ್ಕೆ ತಲೆಗೆ ಹಲ್ಲೆ ನಡೆಸಿದ್ದಾನೆ. ರಾಜೇಶ ಬಿಡಿಸಲು ಹೋದಾಗ ಆರೋಪಿ ಚಿದಾನಂದನು ಚೇತನನನ್ನುದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಚೇತನ್ ಬಳಿ ಇದ್ದ ಆತನ ಮೊಬೈಲ್ ಪೆÇೀನ್ ಕೂಡಾ ತೆಗೆದುಕೊಂಡು ಹೋಗಿದ್ದಾನೆ. 

ಹಲ್ಲೆಯ ಪರಿಣಾಮ ಚೇತನ್ ತಲೆಗೆ ಮುಖಕ್ಕೆ ರಕ್ತ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ರಾಜೇಶ ಮತ್ತು ಇತರರು ಚಿಕಿತ್ಸೆಗಾಗಿ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾದೆ ಚೇತನ್ ಮೃತಪಟ್ಟಿದ್ದ. ಈ ಬಗ್ಗೆ ರಾಜೇಶ್ ನೀಡಿದ ದೂರಿನಂತೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 232/2020 ಕಲಂ 302, 307, 448, 504, 506, 201 ಐಪಿಸಿಯಂತೆ ¥್ರÀಕರಣ ದಾಖಲಾಗಿತ್ತು. 

ಸದ್ರಿ ಪ್ರಕರಣದಲ್ಲಿ ತನಿಖಾಧಿಕಾರಿ ಪೆÇಲೀಸ್ ಇನ್ಸ್ ಪೆಕ್ಟರ್ ಬಿ.ಎಸ್. ದಿನೇಶ್ ಕುಮಾರ ಮತ್ತು ತನಿಖಾ ಸಹಾಯಕ ಕಾಂತಪ್ಪ ಅವರು ಸುಮಾರು 40 ಸಾಕ್ಷಿದಾರರನ್ನು ವಿಚಾರಿಸಿ ಹಾಗೂ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ದ ಸಾಕ್ಷ್ಯಧಾರ ಮೂಲಕ ಆರೋಪವನ್ನು ಸಾಬೀತುಪಡಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಜಗದೀಶ ಅವರು ಈ ಎಲ್ಲಾ ಸಾಕ್ಷ್ಯ ಮತ್ತು ಸಾಕ್ಷಿದಾರರನ್ನು ವಿಚಾರಣೆ ನಡೆಸಿದ್ದು. ಸಾಕ್ಷಿದಾರ ಪರವಾಗಿ ಸರ್ಕಾರಿ ವಕೀಲರಾದ ಶ್ರೀಮತಿ ಜ್ಯೋತಿ ನಾಯಕ್ ಅವರು ಆರೋಪಿಯ ಕೃತ್ಯವನ್ನು ನ್ಯಾಯಾಲಯದಲ್ಲಿ ಬಲವಾಗಿ ವಾದ ಮಂಡಿಸಿರುವುದರಿಂದ ಆರೋಪಿತನು ಮಾಡಿರುವ ಕೃತ್ಯವು ಸಾಕ್ಷ್ಯಧಾರಗಳಿಂದ ಸಾಬೀತಾಗಿರುªÅÀದರಿಂದ ನ್ಯಾಯಾಧೀಶ ಜಗದೀಶ್ ಅವರು ಆರೋಪಿಗೆ  ಜೀವಾವದಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನ್ಯಾಯಾಲಯP್ಕÉ ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ಹಾಜರಾಗುವಂತೆ ಮೂಡಬಿz್ರÉ ಠಾಣಾ ಸಿಬ್ಬಂದಿ ಅಶೋಕ್ ಅವರು ಸಹಕರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 2020ರಲ್ಲಿ ನಡೆದ ಮೂಡಬಿದ್ರೆ ಆಳ್ವಾಸ್ ಕ್ಯಾಂಟೀನ್ ಸಿಬ್ಬಂದಿ ಚೇತನ್ ಎಂಬಾತನ ಕೊಲೆ ಆರೋಪಿ ಚಿದಾನಂದಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ Rating: 5 Reviewed By: karavali Times
Scroll to Top