ಬಂಟ್ವಾಳ, ನವೆಂಬರ್ 13, 2025 (ಕರಾವಳಿ ಟೈಮ್ಸ್) : ಕಿರು ಚಿತ್ರ ನಿರ್ಮಾಣದ ಯುವಕರ ತಂಡದ ನೂತನ ಸಂಸ್ಥೆ ಎನ್ ಎಸ್ ಸಿನಿ ಕ್ರಿಯೇಶನ್ಸ್ ಬಿ ಸಿ ರೋಡು ಇದರ ಉದ್ಘಾಟನೆ ಮತ್ತು ಲೋಗೋ ಬಿಡುಗಡೆ ಸಮಾರಂಭ ಹಾಗೂ ನಾಟಕ ಪ್ರದರ್ಶನ ನವೆಂಬರ್ 16 ರಂದು ಬಿ ಸಿ ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ.
ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ಅನಾರೋಗ್ಯಕ್ಕೊಳಗಾದ ಕಲಾವಿದನಿಗೆ ಆರ್ಥಿಕ ಸಹಾಯ ವಿತರಣೆ, ಸಾಧಕರಿಗೆ ಸನ್ಮಾನ ಬಳಿಕ 7 ಗಂಟೆಯಿಂದ ತಾಂಬೂಲ ಕಲಾವಿದೆರ್ ಪೂಂಜಾಲಕಟ್ಟೆ ಇವರಿಂದ “ಎಲ್ಲೆ ದಾದ ಏರೆಗ್ ಗೊತ್ತು?” ತುಳು ಹಾಸ್ಯ, ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಿನಿ ಸಂಸ್ಥೆಯ ಸಂಚಾಲಕ ರಚನ್ ಆಲಾಡಿ ತಿಳಿಸಿದ್ದಾರೆ.















0 comments:
Post a Comment