ಬಂಟ್ವಾಳ, ಫೆಬ್ರವರಿ 25, 2026 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 193/2019 ಕಲಂ 427, 504, 394, 341 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿ, ಸುಮಾರು ಎರಡು ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕನ್ಯಾನ ನಿವಾಸಿ ಇಬ್ರಾಹಿಂ ಬಾತೀಸ್ ಎಂಬಾತನನ್ನು ಫೆ 24 ರಂದು ಸೌದಿ ಅರೇಬಿಯಾದಿಂದ ಮರಳಿ ಬರುವಾಗ, ಮಂಗಳೂರು ವಿಮಾನ ನಿಲ್ದಾಣದ ಇಮಿಗ್ರೇಶನ್ ವಿಭಾಗದ ಸಹಕಾರದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಠಾಣಾ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಬಂಧಿತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆತನಿಗೆ ಮಾರ್ಚ್ 7 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
25 February 2026
- Blogger Comments
- Facebook Comments
Subscribe to:
Post Comments (Atom)















0 comments:
Post a Comment