12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಟ್ವಾಳ ಪೊಲೀಸರ ಬಲೆಗೆ - Karavali Times 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಟ್ವಾಳ ಪೊಲೀಸರ ಬಲೆಗೆ - Karavali Times

728x90

24 February 2026

12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಟ್ವಾಳ ಪೊಲೀಸರ ಬಲೆಗೆ

ಬಂಟ್ವಾಳ, ಫೆಬ್ರವರಿ 24, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 152/2014 ಕಲಂ 14(ಎ)(ಬಿ)14(ಸಿ) ಫಾರೀನರ್ಸ್ ಆಕ್ಟ್ ಆರ್/ಡಬ್ಲ್ಯು 34 ಐಪಿಸಿ ಪ್ರಕರಣದಲ್ಲಿ ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಡುಪಿ ನಿವಾಸಿ ತಾಜ್ ಮೊಹಮ್ಮದ್ ಯುಸೂಫ್ (59) ಎಂಬಾತನನ್ನು ಫೆ 24 ರಂದು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಟ್ವಾಳ ಎಎಸ್ಪಿ ಯಶ್ ಕುಮಾರ್ ಶರ್ಮಾ ಅವರ ನಿರ್ದೇಶನದಲ್ಲಿ, ಪಿಎಸ್ಸೈಗಳಾದ ಮಂಜುನಾಥ ಟಿ  ಮತ್ತು ಕೃಷ್ಣಕಾಂತ ಕೆ ಅವರುಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಶಿವಾನಂದ ಮಡ್ಡಿ, ಶಿದ್ದಪ್ಪ, ಪ್ರವೀಣ್ ಅವರುಗಳ ತಂಡ ಉಡುಪಿ ಜಿಲ್ಲೆಯ ಕಾರ್ಕಳ ಎಂಬಲ್ಲಿ ದಸ್ತಗಿರಿ ಮಾಡಿದ್ದು, ಫೆ 24 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಟ್ವಾಳ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top