ಬಂಟ್ವಾಳ, ಫೆಬ್ರವರಿ 03, 2026 (ಕರಾವಳಿ ಟೈಮ್ಸ್) : ಮಡಂತ್ಯಾರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ಅಡವಿಡಲು ನಕಲಿ ಚಿನ್ನದ ಸರಗಳನ್ನು ನೀಡಿ ವಂಚಿಸಲು ಯತ್ನಿಸಿದ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕು ಕುಳಿ ಗ್ರಾಮದ ನಿವಾಸಿ ಅಬ್ದುಲ್ ನಝೀರ್ (43) ಹಾಗೂ ಬೋಳಂತೂರು ಗ್ರಾಮದ ಪ್ರಮೋದ್ ಪಿ (50) ಎಂದು ಹೆಸರಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಫೆಬ್ರವರಿ 2 ರಂದು ಬೆಳಿಗ್ಗೆ 2 ಗ್ರಾಹಕರು ಬಂದು ಅದರಲ್ಲಿ ಆರೋಪಿ ಅಬ್ದುಲ್ ನಝೀರ್ ಎಂಬಾತನ ಹೆಸರಿನಲ್ಲಿ ಚಿನ್ನದ ಸರ ಅಡವಿಡಲು ಇರುವುದಾಗಿ ತಿಳಿಸಿದಂತೆ 3 ಚಿನ್ನದ ಸರಗಳನ್ನು ನೀಡಿದ್ದು, ಸದ್ರಿ ಚಿನ್ನವನ್ನು ಪರೀವೀಕ್ಷಕರಲ್ಲಿ ಪರಿಶೀಲನೆ ನಡೆಸಿದಾಗ, ಸದ್ರಿ ಮೂರು ಚಿನ್ನದ ಸರಗಳು ನಕಲಿ ಎಂದು ಸಾಬೀತಾದ ಹಿನ್ನಲೆಯಲ್ಲಿ ಸಂಘದ ವ್ಯವಸ್ಥಾಪಕಿ ಅಶ್ವಿತಾ ಅವರು ಪೊಲೀಸರಿಗೆ ದೂರು ನೀಡಿದ್ದರು.














0 comments:
Post a Comment