ಬಂಟ್ವಾಳ, ಫೆಬ್ರವರಿ 03, 2026 (ಕರಾವಳಿ ಟೈಮ್ಸ್) : ಮಡಂತ್ಯಾರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ಅಡವಿಡಲು ನಕಲಿ ಚಿನ್ನದ ಸರಗಳನ್ನು ನೀಡಿದ ಬಗ್ಗೆ ಆರೋಪಿ ವಿರುದ್ದ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಅಬ್ದುಲ್ ನಝೀರ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕು, ಪಾರೆಂಕಿ ಗ್ರಾಮದ ಮಡಂತ್ಯಾರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ (ನಿ) ಇದರ ವ್ಯವಸ್ಥಾಪಕಿ, ಬಂಟ್ವಾಳ ತಾಲೂಕು, ಸರಪಾಡಿ ಗ್ರಾಮದ ನಿವಾಸಿ ಅಶ್ವಿತಾ (34) ಅವರು ಪೊಲೀಸರಿಗೆ ದೂರು ನೀಡಿದ್ದು, ಫೆಬ್ರವರಿ 2 ರಂದು ಬೆಳಿಗ್ಗೆ 2 ಗ್ರಾಹಕರು ಬಂದು ಅದರಲ್ಲಿ ಆರೋಪಿ ಅಬ್ದುಲ್ ನಝೀರ್ ಎಂಬಾತನ ಹೆಸರಿನಲ್ಲಿ ಚಿನ್ನದ ಸರ ಅಡವಿಡಲು ಇರುವುದಾಗಿ ತಿಳಿಸಿದಂತೆ 3 ಚಿನ್ನದ ಸರಗಳನ್ನು ನೀಡಿದ್ದು, ಸದ್ರಿ ಚಿನ್ನವನ್ನು ಪರೀವೀಕ್ಷಕರಲ್ಲಿ ಪರಿಶೀಲನೆ ನಡೆಸಿದಾಗ, ಸದ್ರಿ ಮೂರು ಚಿನ್ನದ ಸರಗಳು ನಕಲಿ ಎಂದು ಸಾಬೀತಾಗಿರುತ್ತದೆ ಎಂದು ನೀಡಿರುವ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment