ಕನ್ಯಾನ : ಶಾಲಾ ಸಮಯದಲ್ಲಿ ಬಾಕ್ಸೈಟ್ ಸಾಗಾಟ ನಡೆಸದಂತೆ ನಿರ್ದೇಶನ - Karavali Times ಕನ್ಯಾನ : ಶಾಲಾ ಸಮಯದಲ್ಲಿ ಬಾಕ್ಸೈಟ್ ಸಾಗಾಟ ನಡೆಸದಂತೆ ನಿರ್ದೇಶನ - Karavali Times

728x90

6 February 2026

ಕನ್ಯಾನ : ಶಾಲಾ ಸಮಯದಲ್ಲಿ ಬಾಕ್ಸೈಟ್ ಸಾಗಾಟ ನಡೆಸದಂತೆ ನಿರ್ದೇಶನ

ಬಂಟ್ವಾಳ, ಫೆಬ್ರವರಿ 06, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಪಾದೇಕಲ್ಲು ಎಂಬಲ್ಲಿ ದಾಖಲಾತಿ ಮತ್ತು ಪರವಾನಿಗೆಯಲ್ಲಿ (ಎಂಡಿಪಿ ಸಂಖ್ಯೆ 252617431ಟಿ003662) (ಲೀಸ್ ಸಂಖ್ಯೆ ಡಿ ಎಸ್ ಕೆ ಎನ್ 5113) ಬಾಕ್ಸೈಟ್ ಮಣ್ಣು ಲಾರಿಗಳ ಮುಖಾಂತರ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಕ್ಕೆ  ಸಾಗಾಟ ಮಾಡುತ್ತಿದ್ದು, ಸದ್ರಿ ಬಾಕ್ಸೈಟ್ ಸಾಗಾಟ ಮಾಡುತ್ತಿದ್ದ ಬಗ್ಗೆ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಿ ಬರುವಾಗ ತೊಂದರೆಯಾಗುತ್ತಿರುವ ಬಗ್ಗೆ ಡಿಸೆಂಬರ್ 30 ರಂದು ಸ್ಥಳೀಯರು ಪ್ರತಿಭಟನೆ ಮಾಡಿದ್ದರು. ಅದರಂತೆ ಶಾಲಾ ಮಕ್ಕಳು ಬೆಳಿಗ್ಗೆ ಶಾಲೆಗೆ ಹೋಗುವ ಸಮಯ ಮತ್ತು ಶಾಲೆ ಬಿಡುವ ಸಮಯ ಲಾರಿಗಳನ್ನು ಸಂಚಾರ ಮಾಡದಂತೆ ಬಾಕ್ಸೈಟ್ ಸರಕು ಸಾಗಾಣಿಕೆ ಮಾಡುವವರಿಗೆ ತಿಳುವಳಿಕೆ ನೀಡಲಾಗಿದೆ ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕನ್ಯಾನ : ಶಾಲಾ ಸಮಯದಲ್ಲಿ ಬಾಕ್ಸೈಟ್ ಸಾಗಾಟ ನಡೆಸದಂತೆ ನಿರ್ದೇಶನ Rating: 5 Reviewed By: karavali Times
Scroll to Top