ಒಕ್ಕೆತ್ತೂರು : ಮನೆ ಮಂದಿ ವಿದೇಶಕ್ಕೆ ತೆರಳಿದ್ದ ವೇಳೆ ಕಳ್ಳತನ - Karavali Times ಒಕ್ಕೆತ್ತೂರು : ಮನೆ ಮಂದಿ ವಿದೇಶಕ್ಕೆ ತೆರಳಿದ್ದ ವೇಳೆ ಕಳ್ಳತನ - Karavali Times

728x90

2 February 2026

ಒಕ್ಕೆತ್ತೂರು : ಮನೆ ಮಂದಿ ವಿದೇಶಕ್ಕೆ ತೆರಳಿದ್ದ ವೇಳೆ ಕಳ್ಳತನ

ಬಂಟ್ವಾಳ, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ಮನೆ ಮಂದಿ ವಿದೇಶಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು 25 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಕಳವುಗೈದ ಘಟನೆ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಎಂಬಲ್ಲಿ ಫೆಬ್ರವರಿ 1 ರಂದು ಬೆಳಕಿಗೆ ಬಂದಿದೆ. 

ಇಲ್ಲಿನ ನಿವಾಸಿ ಮಹಮ್ಮದ್ ನೌಫಲ್ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳ ಹಿಂದೆ ಇವರ ಪತ್ನಿ ಸಫಿಯಾ ಹಾಗೂ ಮಗಳು ವಿಸಿಟ್ ವೀಸಾದಲ್ಲಿ ವಿದೇಶಕ್ಕೆ ತೆರಳಿದ್ದರು. ಈ ಸಂದರ್ಭ ನೌಫಲ್ ಅವರ ತಂದೆ ಕಾಸಿಂ ಪಕ್ರೋಜಿ ಅವರು ಒಕ್ಕೆತ್ತೂರು ಮನೆಗೆ ವಾರಕ್ಕೊಮ್ಮೆ ಹೋಗಿ ನೋಡಿಕೊಂಡು ಬರುತ್ತಿದ್ದರು. 

ಜನವರಿ 30 ರಂದು ಸಫಿಯಾಳ ತಾಯಿ ಜೊಹರಾ ಅವರು ಸದ್ರಿ ಮನೆಗೆ ಬಂದು ಹೋಗಿದ್ದರು. ಫೆಬ್ರವರಿ 1 ರಂದು ಸದ್ರಿ ಮನೆಯ ಬಾಗಿಲು ತೆರೆದಿರುವ ಬಗ್ಗೆ ಮನೆ ಸಮೀಪದ ಅಬ್ದುಲ್ಲ ಅವರು ನೀಡಿದ ಮಾಹಿತಿಯಂತೆ ಕಾಸಿಂ ಪ್ರಕೋಜಿ ಅವರು ತೆರಳಿ ಪರಿಶೀಲನೆ ನಡೆಸಿದಾಗ ಮನೆಯ ಎದುರಿನ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಒಳಗೆ ಹೋಗಿ ನೋಡಿದಾಗ ಮನೆಯ ಕಪಾಟುಗಳನ್ನು ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿರುವುದು ಕಂಡು ಬಂದಿದೆ. ಮನೆಯ ಮುಂಬಾಗಿಲು ಯಾವುದೋ ಸಾಧನದಿಂದ ಮಿಟಿ ಮುರಿದು ಮನೆಯಿಂದ ಸುಮಾರು 25 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಕಾಸಿಂ ಪಕ್ರೋಜಿ ಅವರು ನೀಡಿದ ದೂರಿನಂತೆ ಈ ಬಗ್ಗೆ ವಿಟ್ಲ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಒಕ್ಕೆತ್ತೂರು : ಮನೆ ಮಂದಿ ವಿದೇಶಕ್ಕೆ ತೆರಳಿದ್ದ ವೇಳೆ ಕಳ್ಳತನ Rating: 5 Reviewed By: karavali Times
Scroll to Top