ಮಂಗಳೂರು, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋಟಿ ವಂಚನೆ ಮಾಡಿದ ತಂಡದ ಜಾಲವನ್ನು ಬೇಧಿಸಿದ ಮಂಗಳೂರು ನಗರ ಸೆನ್ ಕ್ರೈಂ ಪೆÇಲೀಸರು ಒಟ್ಟು 11 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೈನಾದ ವಂಚಕರಿದ್ದು, ನೇಪಾಳ ಪೆÇಲೀಸರು ಚೈನಾದ ವಂಚಕರನ್ನು ದಸ್ತಗಿರಿ ಮಾಡಿರುತ್ತಾರೆ. 5 ಭಾರತೀಯ ಆರೋಪಿಗಳು ತಲೆಮರಿಸಿಕೊಂಡಿದ್ದು, ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗುಜರಾತ್ ರಾಜ್ಯದ ಬಾವಾ ನಗರ್ ಜಿಲ್ಲೆಯ ನಿವಾಸಿ ದೇವರಾಜ್ ಬಾಯ್ ಅವರ ಪುತ್ರ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳ ರಾಜ್ಯದ ನಿವಾಸಿ ಸರಂಜಿತ್ ಕೊಲ್ಲತ್ತಾ ಅವರ ಪುತ್ರ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್ ರಾಜ್ಯದ ಸಿಂಗಬುಮ್ ಜಿಲ್ಲೆಯ ನಿವಾಸಿಗಳಾದ ದಿವಂಗತ ಪುಪ್ಲ ಕುಮಾರ್ ರಾವ್ ಅವರ ಪುತ್ರ ಪುಪ್ಲ ಶಿವ ಕುಮಾರ್ ರಾವ್ (32), ನಿರ್ಮಲ್ ಕುಮಾರ್ ಅವರ ಪುತ್ರ ಮಿಥುನ್ ಕುಮಾರ್ ಮಂಗರಾಜ್ (38), ಡಿಯೋಗರ್ ಜಿಲ್ಲೆಯ ನಿವಾಸಿ ಪಾವು ಮೆಂಡನ್ ಅವರ ಪುತ್ರ ರಾಜೇಶ್ ಮೆಂಡನ್, (30), ಉತ್ತರ ಪ್ರದೇಶ ರಾಜ್ಯದ ಮಾವೋ ಜಿಲ್ಲೆಯ ನಿವಾಸಿ ಕೌಶಾಲ್ ಪಾಂಡೆ ಅವರ ಪುತ್ರ ಗೌರವ್ ಪಾಂಡೆ (24), ಸುಲ್ತಾನ್ ಪುರ ಜಿಲ್ಲೆಯ ನಿವಾಸಿ ಗ್ಯಾನ್ ಪ್ರಕಾಶ್ ಅವರ ಪುತ್ರ ಹರ್ಷ್ ಮಿಸ್ರಾ (22), ಲಕ್ನೋ ಜಿಲ್ಲೆಯ ನಿವಾಸಿ ಮೊಹಮ್ಮದ್ ಸಾಬಿತ್ ಅಲಿ ಅವರ ಪುತ್ರ ಮೊಹಮ್ಮದ್ ಆಕೀಬ್ ಅಲಿ (27), ಝಾನ್ಸಿ ಜಿಲ್ಲೆಯ ನಿವಾಸಿ ಜೋಕಾನ್ ಅಲಿ ಅವರ ಪುತ್ರ ನೌಶಾದ್ ಅಲಿ (34) ಬಿಹಾರ್ ರಾಜ್ಯದ ನಳಂದ ಜಿಲ್ಲೆಯ ನಿವಾಸಿ ಶ್ರೀಕಾಂತ್ ಕುಮಾರ್ ಅವರ ಪುತ್ರ ರಾಜೀವ್ ರಂಜನ್ ಕುಮಾರ್ (30) ಹಾಗೂ ರಾಜಸ್ಥಾನ ರಾಜ್ಯದ ಜೈಪುರ್ ನಿವಾಸಿ ಪ್ರೇಮ್ ಚಂದ್ ಅವರ ಪುತ್ರ ಓಂ ಪ್ರಕಾಶ್ ಯಾಧವ್ (37) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಲ್ಯಾಪ್ ಟಾಪ್, 21 ಮೊಬೈಲ್ ಪೆÇೀನುಗಳು, ವಿವಿಧ ಕಂಪೆನಿಯ 20 ಸಿಮ್ ಗಳು, ಬೇರೆ ಬೇರೆ ಬ್ಯಾಂಕುಗಳ 20 ಡೆಬಿಟ್-ಕ್ರೆಡಿಟ್ ಕಾರ್ಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿತರ ಮೊಬೈಲ್ ಫೆÇೀನ್ ಹಾಗೂ ಲ್ಯಾಪ್ ಟಾಪ್ ಗಳನ್ನು ಪರಿಶೀಲಿಸಿದಾಗ ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಕಂಡುಬಂದಿದ್ದು, ಸದ್ರಿ ಬ್ಯಾಂಕ್ ಖಾತೆಗಳ ಮೇಲೆ ಒಟ್ಟು 4580ಕ್ಕೂ ಹೆಚ್ಚು ಎನ್ ಸಿ ಆರ್ ಪಿ ಪೋರ್ಟಲಿನಲ್ಲಿ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 1 ಬ್ಯಾಂಕ್ ಖಾತೆಯಲ್ಲಿ 167 ಕೋಟಿ ಹಣ ವರ್ಗಾವಣೆಯಾಗಿರುತ್ತದೆ. ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಬಳಸಿದ 10 ಬ್ಯಾಂಕ್ ಖಾತೆಗಳಲ್ಲಿ ಸುಮಾರು 30,70,26,725 ಹಣ ವರ್ಗಾವಣೆ ಆಗಿದ್ದು, ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆಗಳನ್ನು ಪಡೆಯಬೇಕಾಗಿದೆ.
ಮಂಗಳೂರು ಸೆನ್ ಕ್ರೈಂ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 02/2026 ಕಲಂ 66(ಸಿ), 66(ಡಿ), ಐಟಿ ಕಾಯ್ದೆ ಕಲಂ 318(4), 308(5) ಬಿ ಎನ್ ಎಸ್ ಪ್ರಕರಣದಲ್ಲಿ ದೂರುದಾರರಿಂದ 1 ಕೋಟಿ 38 ಲಕ್ಷ ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದು, ಸದ್ರಿ ವಂಚಕರು ನೇಪಾಳದಲ್ಲಿ ಕುಳಿತು ವಂಚನೆ ಮಾಡುತ್ತಿದ್ದ ಬಗ್ಗೆ ತನಿಖೆಯಿಂದ ಹಾಗೂ ತಾಂತ್ರಿಕ ವಿಶ್ಲೇಷಣೆಯಿಂದ ಪತ್ತೆ ಹಚ್ಚಿ ವಂಚಕರ ಗ್ಯಾಂಗ್ ದಸ್ತಗಿರಿ ಮಾಡಲಾಗಿದೆ.
ಒಂದು ವಂಚಕರ ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್ ಅವರನ್ನು ನೇಮಕ ಮಾಡಿಕೊಂಡು, ವಂಚನೆಯ ಹಣವನ್ನು ವರ್ಗಾವಣೆ ಮಾಡುವುದು ಹಾಗೂ ಹಣವನ್ನು ಯು ಎಸ್ ಡಿ ಟಿ ನಲ್ಲಿ ಬದಲಾಯಿಸಿ ನಂತರ ವಿದೇಶಕ್ಕೆ ಕಳುಹಿಸುತ್ತಾರೆ. ಇನ್ನೊಂದು ವಂಚಕರ ತಂಡವು ಕಾಂಬೋಡಿಯಾ ಮತ್ತು ಇತರ ದೇಶಗಳಲ್ಲಿ ಕುಳಿತು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ವಿದೇಶಗಳಿಗೆ ಕೆಲಸಕ್ಕೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಹೆಚ್ಚು ಹಣ ಗಳಿಸುವ ಆಮೀಷ ಒಡ್ಡಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸುತ್ತಿದ್ದು, ಈ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವು ನಿಯಂತ್ರಣ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸೆನ್ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಉಪಯೋಗಿಸಲು ದೂರುದಾರರಿಗೆ ನೀಡಿದ 10 ಬ್ಯಾಂಕ್ ಖಾತೆಗಳಲ್ಲಿ ದೇಶ್ಯಾದಂತ ಎನ್ ಸಿ ಆರ್ ಪಿ ಪೋರ್ಟಲಿನಲ್ಲಿ ಸುಮಾರು 128 ಪ್ರಕರಣಗಳು ಮತ್ತು ಒಟ್ಟು 36 ಎಫ್ ಐ ಆರ್ ದಾಖಲಾಗಿರುತ್ತದೆ.
ವಂಚಕರು ಬೇರೆ ಬೇರೆ ಕಂಪೆನಿಯ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಹಾಗೂ ಟೆಲಿಗ್ರಾಂ ಖಾತೆಗಳ ಮೂಲಕ ತಮ್ಮ ನಿಜವಾದ ಹೆಸರುಗಳನ್ನು ಮರೆಮಾಚಿ ಜಾಹೀರಾತು ಮೂಲಕ ಕಾಪೆರ್Çೀರೇಟ್ ಖಾತೆಗಳು, ಕರೆಂಟ್ ಖಾತೆಗಳು, ಯು ಎಸ್ ಡಿ ಟಿ ಟು ಐ ಎನ್ ಆರ್ ಎಕ್ಸ್ ಚೇಂಜ್ ಮ್ಯಾನೇಜ್ ಮೆಂಟ್ ಆಪರೇಟರ್ ಗಳು ಮತ್ತು ಒಟಿಪಿ ವರ್ಕರ್ ಅವರು ಬೇಕಾಗಿದ್ದಾರೆ ಎಂಬುದಾಗಿ ಟೆಲಿಗ್ರಾಂ ಮತ್ತು ಇನ್ಸ್ಟಾಗ್ರಾಂ ಮೂಲಕ ಬ್ಯಾಂಕ್ ಖಾತೆದಾರರನ್ನು ಸಂಪರ್ಕಿಸುತ್ತಾರೆ. ದುರಾಸೆಗೊಳಗಾದವರು ಅವರನ್ನು ಸಂಪರ್ಕಿಸಿದಾಗ 5% ರಿಂದ 10% ಕಮಿಷನ್ ಕೊಡುವುದಾಗಿ ಮತ್ತು ಅವರಿಗೆ ಬೇಕಾದ ವಿಮಾನ ಟಿಕೆಟ್, ಕ್ಯಾಬ್ ಬುಂಕಿಂಗ್, ಹೋಟೇಲ್, ಲಾಡ್ಜ್ ವ್ಯವಸ್ಥೆ ನೀಡುವುದಾಗಿ ಹಾಗೂ ಇವರಿಗೆ ವಿವಿಧ ರೀತಿಯ ಆಮಿಷಗಳನ್ನು ನೀಡಿ, ದುಬೈ, ನೇಪಾಳ ಮುಂತಾದ ಕಡೆಗಳಲ್ಲಿ ಕರೆಸಿಕೊಳ್ಳುತ್ತಾರೆ. ನಂತರ ಖಾತೆದಾರರನ್ನು ಮತ್ತು ಖಾತೆಗಳನ್ನು ಪೂರೈಸುವವರನ್ನು ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ವಂಚಕರು ತಮಗೆ ಸೇರಿದ ವಿವಿಧ ಕಂಪೆನಿಯ ಮೊಬೈಲ್ ಫೆÇೀನ್ ಗಳಿಗೆ ಖಾತೆದಾರರ ಸಿಮ್ ಗಳನ್ನು ಹಾಕಿಕೊಂಡು, ನೆಟ್ ಬ್ಯಾಂಕಿಂಗ್, ಮುಖಾಂತರ ವಂಚನೆಯ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ವಂಚಕರು ವಂಚನೆ ಮಾಡಿದ ಹಣದಿಂದ ಯು ಎಸ್ ಡಿ ಟಿ ಗಳನ್ನು ಬೇರೆ ಬೇರೆ ಕಡೆಯಿಂದ ಖರೀದಿ ಮಾಡಿ, ಪ್ರತಿದಿನ ವಿದೇಶದಲ್ಲಿನ ಆರೋಪಿತರಿಗೆ ಕಳುಹಿಸುತ್ತಾರೆ.
ಕಾಂಬೋಡಿಯಾ ಮತ್ತು ದುಬೈಗಳಲ್ಲಿ ಕುಳಿತು, ನಮ್ಮ ದೇಶದ ನಾಗರಿಕರಿಗೆ ಮುಖ್ಯ ವಂಚಕರು ಅಪರಿಚಿತ ವಾಟ್ಸಾಪ್ ಮೊಬೈಲ್ ನಂಬ್ರಗಳ ಮೂಲಕ ಇನ್ ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್ ಬುಕ್ ತಾಣಗಳ ಮುಖಾಂತರ ಹೂಡಿಕೆದಾರರನ್ನು ಸಂಪರ್ಕಿಸಿ ಹೆಚ್ಚಿನ ಲಾಭಂಶ ನೀಡುವುದಾಗಿ ಆಕರ್ಷಿಸುತ್ತಾರೆ. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಂಶ ಬಂದಿರುವುದಾಗಿ ಆಪ್ ಮೂಲಕ ತೋರಿಸುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದ ಲಾಭಂಶದ ಹಣವನ್ನು ನೀಡಿ ನಂಬಿಕೆ ಬರುವ ಹಾಗೆ ಮಾಡಿದ ನಂತರ ಉಳಿದ ಹಣನ್ನು ಡ್ರಾ ಮಾಡಬೇಕಾದರೆ, ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕೆಂದು ಪುಸುಲಾಯಿಸಿ ಹಣವನ್ನು ಹೂಡಿಕೆ ಮಾಡಿಸುತ್ತಾರೆ. ಈ ರೀತಿ ಪ್ರತಿದಿನ ಈ ತಂಡವು ಭಾರತೀಯರನ್ನು 60 ಲಕ್ಷದಿಂದ 1 ಕೋಟಿಯವರೆಗೆ ಇನ್ವೆಸ್ಟ್ ಮೆಂಟ್ ಫ್ರಾಡ್ ಗೆ ಒಳಪಡಿಸುತ್ತಿದೆ.
ವಿದೇಶಗಳಲ್ಲಿ ಕೆಲಸಕ್ಕಾಗಿ ನೋಡುತ್ತಿರುವ ಯುವಕರಿಗೆ ನಕಲೀ ಜಾಹಿರಾತುಗಳ, ಏಜೆಂಟ್ ಗಳ ಮೂಲಕ ನಂಬಿಸಿ, ಪುಸಲಾಯಿಸಿ ಅವರನ್ನು ಟೂರಿಸ್ಟ್ ವೀಸಾದಲ್ಲಿ ಮಧ್ಯ ಪ್ರಾಂಚ್ಯ ದೇಶಗಳಿಗೆ ಕರೆದುಕೊಂಡು ಹೋಗಿ ಅವರಿಂದ ದಾಖಲೆಗಳನ್ನು ಮತ್ತು ಪಾಸ್ ಪೆÇೀರ್ಟ್ ತೆಗೆದುಕೊಂಡು ಅವರನ್ನು ಅಲ್ಲಿ ಗೊತ್ತಿರದೇ ಇರುವ ಸ್ಥಳದಲ್ಲಿ ಬಂಧಿಸುತ್ತಾರೆ. ಅವರಿಂದ ಒತ್ತಾಯ ಪೂರ್ವಕವಾಗಿ ಮುಗ್ದ ಹೂಡಿಕೆದಾರರಿಗೆ ಅವರ ಮಾತೃ ಭಾಷೆಯಲ್ಲೇ ಮಾತನಾಡಿಸಿ ಪುಸಲಾಯಿಸಿ ಹಣ ವರ್ಗಾಹಿಸುವಂತೆ ಮಾಡಿಸುತ್ತಾರೆ. ಅವರಿಗೆ ಸರಿಯಾಗಿ ಊಟ ಉಪಹಾರ ನೀಡದೇ ಹಾಗೂ ಕುಟುಂಬದವರೊಂದಿಗೆ ಸಂಪರ್ಕವನ್ನು ಮಾಡಲು ಅವಕಾಶ ಕೊಡದೇ ಕೂಡಿ ಹಾಕಿ ಭಾರತದ ನಾಗರೀಕರಿಗೆ ವಂಚನೆ ಮಾಡಲು ಭಾರತೀಯರನ್ನೇ ಬಳಸುತ್ತಿದ್ದು, ಈ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರುವುದು.
ಉದ್ಯೋಗಕ್ಕೆ ವಿದೇಶಗಳಿಗೆ ಏಜೆನ್ಸಿ ಮೂಲಕ ಹೋಗುವ ಯುವಕರು ಪೆÇ್ರಟೆಕ್ಟ್ಸ್ ಆಫ್ ಇಮಿಗ್ರೇಟ್ಸ್ ಬಳಿ ನೊಂದಣಿ ಆಗಿರುವ ಏಜೆನ್ಸಿ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದು ಅವರ ಮೂಲಕವಷ್ಟೇ ಕೆಲಸಗಳನ್ನು ಪಡೆದು, ಚೆಕ್ ಮಾಡಿ ಉದ್ಯೋಗಕ್ಕೆ ವಿದೇಶಕ್ಕೆ ಹೋಗುವುದು ಉತ್ತಮ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಜನರನ್ನು ವಿದೇಶದಲ್ಲಿ ಉತ್ತಮ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅವರನ್ನು ಸೈಬರ್ ಸ್ಲೇವರಿ ಆಗಿ ಕೆಲಸ ಮಾಡಿಸುತ್ತಿದ್ದವರನ್ನು ರಕ್ಷಿಸಲಾಗಿದ್ದು, ಅವರು ನೀಡದ ದೂರಿನ ಮೇಲೆ ಪ್ರಕರಣ ಕೂಡ ದಾಖಲಾಗಿರುತ್ತದೆ.
ವಂಚಕರು ವಂಚನೆಯಾದ ಹಣದಲ್ಲಿ ಆನ್ ಲೈನ್ ಮೂಲಕ ಯು ಎಸ್ ಡಿ ಟಿಗಳನ್ನು ಖರೀದಿ ಮಾಡಿಕೊಂಡು ಅದೇ ದಿನ ಬೇರೆ ದೇಶಗಳಿಗೆ ಕಳುಹಿಸುವುದರಿಂದ ವಿದೇಶಕ್ಕೆ ಹಣ ಹೋಗುತ್ತದೆ. ವಂಚನೆಗೊಳಗಾದ ದೂರುದಾರರು ಅದೇ ದಿನ ದೂರನ್ನು ನೀಡಲು ವಿಳಂಬ ಮಾಡುವುದರಿಂದ ಹಣ ಮರಳಿ ಸಿಗುವುದು ಕಷ್ಟವಾಗುತ್ತದೆ.
ಕಮೀಷನ್ ಆಸೆಗೆ ಒಳಗಾಗಿ ಬ್ಯಾಂಕ್ ಖಾತೆಯನ್ನು ವಂಚಕರಿಗೆ ನೀಡಿದಲ್ಲಿ ಖಾತೆದಾರರು ಸಹ ಆರೋಪಿತರಾಗುತ್ತಾರೆ. ಮುಖ್ಯ ವಂಚಕರು ವಿದೇಶದಲ್ಲಿ ಕುಳಿತು ನಿರ್ವಹಣೆ ಮಾಡುತ್ತಿರುವುದರಿಂದ ಪ್ರಮುಖ ಆರೋಪಿಗಿಂತ ಮೊದಲೇ ಕಮಿಷನ್ ಆಸೆಗೆ ಒಳಗಾದವರು ಕಾನೂನು ಪ್ರಕಾರ ಶೀಘ್ರವಾಗಿ ದಸ್ತಗಿರಿಯಾಗುತ್ತಾರೆ.
ವಿದೇಶದಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯ ಆಕರ್ಷಿತ ಜಾಹೀರಾತುಗಳನ್ನು ನೋಡಿ, ಹೆಚ್ಚಿನ ಲಾಭಾಂಶದ ವಂಚನೆಗೆ ಒಳಗಾಗಬೇಡಿ. ಹಾಗೂ ಹೂಡಿಕೆಯನ್ನು ಮಾಡುವಾಗ ನಕಲಿ ಸೆಬಿ ಸರ್ಟಿಪೀಕೇಟ್, ನಕಲಿ ಡಿಮೇಟ್ ಖಾತೆಗಳನ್ನು ನೋಡಿ ಮೋಸ ಹೋಗಬೇಡಿ. ಹೆಚ್ಚು ಹಣ ಗಳಿಸಬೇಕೆಂಬ ಆಸೆಗೆ ಬಿದ್ದ ಹೆಚ್ಚಿನ ವಿದ್ಯಾವಂತರು ಇತ್ತಿಚೀನ ದಿನಗಳಲ್ಲಿ ಆನ್ ಲೈನ್ ಹೂಡಿಕೆ, ಹಣ ದ್ವಿಗುಣ, ಟ್ರೇಡಿಂಗ್ ಹೂಡಿಕೆಯಲ್ಲಿ ವಿಚಾರಿಸದೇ ವಂಚಕರ ಮೋಸದ ಬಲೆಗೆ ಬಿದ್ದು, ಹಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ. ಹೂಡಿಕೆ ಮಾಡಬೇಕಾದರೆ ಸೆಬಿ ರಿಜಿಸ್ಟ್ರೇಶನ್ ಆಗಿರುವ ಸಂಸ್ಥೆ ಅಥವಾ ಬ್ರೋಕರ್ ಅವರಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಮಾಡಿಸುವುದು. ಹೆಚ್ಚಿನ ಲಾಭಾಂಶ ಭರವಸೆಯ ಹೂಡಿಕೆ ಬಗ್ಗೆ ಅತೀ ಹೆಚ್ಚಿನ ಕಾಳಜಿ ಅವಶ್ಯವಾಗಿದೆ.
ವಂಚನೆಯಾದ ಒಂದು ಗಂಟೆಯ ಒಳಗೆ 1930ಗೆ ಕರೆ ಮಾಡುವುದು ಹಾಗೂ ಹತ್ತಿರದ ಪೆÇಲೀಸ್ ಠಾಣೆಗೆ ತಕ್ಷಣವೇ ದೂರು ಸಲ್ಲಿಸುವುದು. ಆನ್ ಲೈನ್ ಗೇಮ್, ನಕಲಿ ಲೋನ್ ಆಪ್, ನಕಲಿ ಪಾರ್ಟ್ ಟೈಮ್ ಜಾಬ್, ನಕಲಿ ಜಾಬ್ ಆಫರ್ ಗಳಿಂದ ದೂರ ಇರುವುದು. ಎಪಿಕೆ ಫೈಲ್ ಮತ್ತು ಲಿಂಕ್ ಗಳ ಬಗ್ಗೆ ಜಾಗ್ರತೆಯಿಂದ ಇರುವುದು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳು, ಆಕರ್ಷಿಕ ಹೂಡಿಕೆಗಳ ಬಗ್ಗೆ ಜಾಗರೂಕರಾಗಿರವುದು., ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಪ್ರೇಮ, ಗೆಳೆತನದ ಮೂಲಕ ಬ್ಯಾಂಕ್ ಖಾತೆಗಳನ್ನು ಮತ್ತು ಸಿಮ್ ಗಳನ್ನು ನೀಡುವುದು, ನಿಮ್ಮ ಅರೆ ನಗ್ನ, ಮತ್ತು ನಗ್ನ ಚಿತ್ರಗಳನ್ನು ಹಂಚಿಕೊಳ್ಳುವುದು, ಗಿಫ್ಟ್ ಕಳುಹಿಸುವುದಾಗಿ ವಂಚನಗೆ ಒಳಗಾಗಿ ಹಣವನ್ನು ಕಳುಹಿಸುವುದರಿಂದ ದೂರವಿರಿ. ವಿಡೀಯೋ ಕಾಲ್ ಮೂಲಕ ಸಿಬಿಐ, ಪೊಲೀಸ್, ಜಡ್ಜಸ್, ಕಸ್ಟಮ್ಸ್, ಸೆಬಿ, ಟ್ರಾಯ್ ಮೊದಲಾದ ಇಲಾಖೆಗಳನ್ನು ಬಳಸಿಕೊಳ್ಳುವ ನಕಲಿ ಅಧಿಕಾರಿಗಳಂತೆ ನಟಿಸಿ, ನಿಮಗೆ ದಸ್ತಗಿರಿ ಬೆದರಿಕೆ ನೀಡಿ ಹಣವನ್ನು ಲೂಟಿ ಮಾಡುವ ವ್ಯಕ್ತಿಗಳಿಂದ ದೂರವಿರಿ. ಯಾವುದೇ ವಿಡೀಯೋ ಕಾಲ್ ಮೂಲಕ ದಸ್ತಗಿರಿ ಮಾಡುವ ಕ್ರಮವನ್ನು ಯಾವ ಇಲಾಖೆಯೂ ಅನುಸರಿಸುತ್ತಿಲ್ಲ. ಹಾಗೂ ಭಾರತೀಯ ಕಾನೂನಿನಲ್ಲಿ ಇರುವುದಿಲ್ಲ. ತಕ್ಷಣ ಪೆÇಲೀಸ್ ಠಾಣೆಗೆ ದೂರು ನೀಡುವುದು. ಆನ್ ಲೈನ್ ಮೂಲಕ ಹೋಟೆಲ್, ಕ್ಯಾಬ್, ಫ್ಲೈಟ್ಸ್ ಬುಕ್ಕಿಂಗ್ ಮಾಡುವಾಗ ಎಚ್ಚರದಿಂದರಬೇಕು. ಗೂಗಲ್ ನಲ್ಲಿ ಸಿಗುವಂತಹ ಯಾವುದೇ ಕಸ್ಟಮರ್ ಕೇರ್ ಗಳ ಬಗ್ಗೆ ಎಚ್ಚರದಿಂದರಬೇಕು ಹಾಗೂ ಯಾವುದೇ ಓಟಿಪಿಗಳನ್ನು ಶೇರ್ ಮಾಡದೇ ಇರುವುದು ಇಂತಹ ವಂಚನೆಗಳಿಂದ ಪಾರಾಗಬಹುದು.
























0 comments:
Post a Comment