ಉಳ್ಳಾಲ, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : ಕಳೆದ 19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಉಳ್ಳಾಲ ಪೆÇಲೀಸ್ ಠಾಣೆಯ ಆರೋಪಿ ಉಳ್ಳಾಲ-ಕೈಕೋ ರೋಡ್ ಸುಭಾಷ್ ನಗರ ನಸೀಮಾ ಮಂಝಿಲ್ ನಿವಾಸಿ ಹಸನಬ್ಬ ಅವರ ಪುತ್ರ ಅನ್ವರ್ ಅಲಿಯಾಸ್ ಅನ್ವರ್ ಹುಸೇನ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಠಾಣಾ ಮೊಕದ್ದಮೆ ಸಂಖ್ಯೆ 285/2007 ಕಲಂ 341, 384, 504, 506 ಆರ್/ಡಬ್ಲ್ಯು 34 ಐಪಿಸಿ ಹಾಗೂ ಮಂಗಳೂರು 3ನೇ ಜೆ ಎಂ ಎಫ್ ಸಿ ನ್ಯಾಯಾಲಯದ ಸಿಸಿ ಸಂಖ್ಯೆ 2904/2014 ಪ್ರಕರಣದಲ್ಲಿ ಈತನ ವಿರುದ್ದ ಮಂಗಳೂರು 3ನೇ ಜೆ ಎಂ ಎಫ್ ಸಿ ನ್ಯಾಯಾಲಯ ಎಲ್ ಪಿ ಸಿ ವಾರಂಟ್ ಹೊರಡಿಸಿತ್ತು. ಈತ ಕಳೆದ 19 ವರ್ಷಗಳಿಂದ ತಲೆಮಾರೆಸಿಕೊಂಡಿದ್ದ. ಈತನನ್ನು ಇದೀಗ ಪತ್ತೆ ಮಾಡಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.














0 comments:
Post a Comment