ಬಂಟ್ವಾಳ, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ವ್ಯಕ್ತಿಯೋರ್ವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಮೂವರು ಮುಸುಕುಧಾರಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ ಮೊಬೈಲ್ ಫೋನ್ ಕಸಿದುಕೊಂಡ ಘಟನೆ ಮಾರ್ನಮಿಗುಡ್ಡೆ ಎಂಬಲ್ಲಿ ಜನವರಿ 31 ರಂದು ಸಂಭವಿಸಿದೆ.
ಹಲ್ಲೆಗೊಳಗಾದವರನ್ನು ವಿಟ್ಲಪಡ್ನೂರು ಗ್ರಾಮದ ಇಸುಬು (56) ಎಂದು ಹೆಸರಿಸಲಾಗಿದೆ. ಇವರು ಜನವರಿ 31 ರಂದು ಸಂಜೆ ಮಾರ್ನಮಿಗುಡ್ಡೆ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಮೂವರು ಅಪರಿಚಿತ ಮುಸುಕುಧಾರಿಗಳು ತಡೆದು ಹಲ್ಲೆ ನಡೆಸಿ, ಕೈಯಿಂದ ಮತ್ತು ಕಟ್ಟಿಗೆ ತುಂಡಿನಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ ಅವರ ಬಳಿ ಇದ್ದ ಮೊಬೈಲ್ ಫೆÇೀನ್ ಕಸಿದುಕೊಂಡು ಪರಾರಿಯಾಗಿರುತ್ತಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment