ರಾಧುಕಟ್ಟೆ : ಹಿಂದಿನಿಂದ ಓಮ್ನಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರೆಯರಿಬ್ಬರಿಗೆ ಗಾಯ - Karavali Times ರಾಧುಕಟ್ಟೆ : ಹಿಂದಿನಿಂದ ಓಮ್ನಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರೆಯರಿಬ್ಬರಿಗೆ ಗಾಯ - Karavali Times

728x90

2 February 2026

ರಾಧುಕಟ್ಟೆ : ಹಿಂದಿನಿಂದ ಓಮ್ನಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರೆಯರಿಬ್ಬರಿಗೆ ಗಾಯ

ಬಂಟ್ವಾಳ, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ಓಮ್ನಿ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆಯರಿಬ್ಬರು ಗಾಯಗೊಂಡ ಘಟನೆ ವಿಟ್ಲಪಡ್ನೂರು ಗ್ರಾಮದ ರಾಧುಕಟ್ಟೆ ಎಂಬಲ್ಲಿ ಜನವರಿ 31 ರಂದು ಸಂಭವಿಸಿದೆ. 

ಗಾಯಗೊಂಡ ಸ್ಕೂಟರ್ ಸವಾರೆಯರನ್ನು ಅಳಿಕೆ ನಿವಾಸಿ ಜೆಸಿಂತ್ ಡಿಸೋಜ (31) ಹಾಗೂ ಸಹಸವಾರೆ ರೇಷ್ಮಾ ಎಂದು ಹೆಸರಿಸಲಾಗಿದೆ. ಸ್ಕೂಟರ್ ಸವಾರರು ಸಾಲೆತ್ತೂರು ಕಡೆಯಿಂದ ತೆರಳುತ್ತಿದ್ದ ವೇಳೆ ರಾಧುಕಟ್ಟೆ ಎಂಬಲ್ಲಿ ನೋಂದಣಿ ಸಂಖ್ಯೆ ತಿಳಿದುಬಾರದ ಬಿಳಿ ಬಣ್ಣದ ಓಮ್ನಿ ಕಾರು ಚಾಲಕದ ನಿರ್ಲಕ್ಷ್ಯದಿಂದ ಸ್ಕೂಟರ್ ಹಿಂಬದಿಗೆ ಡಿಕ್ಕಿ ಹೊಡೆದಿದೆ. 

ಅಪಘಾತದಿಂದ ಸ್ಕೂಟರ್ ಸವಾರರೆಯರಿಬ್ಬರು ಗಾಯಗೊಂಡಿದ್ದು ಅವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ರಾಧುಕಟ್ಟೆ : ಹಿಂದಿನಿಂದ ಓಮ್ನಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರೆಯರಿಬ್ಬರಿಗೆ ಗಾಯ Rating: 5 Reviewed By: karavali Times
Scroll to Top