ಬಂಟ್ವಾಳ, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಲ ಗ್ರಾಮದ ಕಳೆಂಜಿಬೈಲು ಆಲೊಟ್ಟು ಎಂಬಲ್ಲಿ ಜನವರಿ 30 ರಂದು ಸಂಭವಿಸಿದೆ.
ಮೃತ ಯುವಕನನ್ನು ಇಲ್ಲಿನ ನಿವಾಸಿ ಉಸ್ಮಾನ್ ಎಂಬವರ ಪುತ್ರ ಮಹಮ್ಮದ್ ಇಕ್ಬಾಲ್ (27) ಎಂದು ಹೆಸರಿಸಲಾಗಿದೆ. ಈತ ಯಾವುದೋ ವಿಚಾರದಲ್ಲಿ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಂದೆ ಉಸ್ಮಾನ್ ಅವರು ನೀಡಿದ ದೂರಿನಂತೆ ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment