ಬಂಟ್ವಾಳ, ಫೆಬ್ರವರಿ 06, 2026 (ಕರಾವಳಿ ಟೈಮ್ಸ್) : ಯುವಕನೋರ್ವನ ಮೃತದೇಹ ಬಿ ಮೂಡ ಗ್ರಾಮದ ಗೂಡಿನಬಳಿ ಕಂಚಿಕಾರ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪ್ರಕಾಶ್ ಪೂಜಾರಿ (34) ಎಂದು ಹೆಸರಿಸಲಾಗಿದೆ. ಈತ ಕೂಲಿ ಕಾರ್ಮಿಕನಾಗಿದ್ದು, ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ಎನ್ನಲಾಗಿದೆ. ಫೆಬ್ರವರಿ 4 ರಂದು ರಾತ್ರಿ 10 ಗಂಟೆಗೆ ಅಮ್ಮನಿಗೆ ಫೋನ್ ಮಾಡಿ ಮಾತನಾಡಿದ್ದು, ಬಳಿಕ ಫೆ 5 ರಂದು ಸಂಜೆ 6 ಗಂಟೆ ವೇಳೆಗೆ ಈತನ ಮೃತದೇಹ ಗೂಡಿನಬಳಿ ನೇತ್ರಾವತಿ ನದಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಬಳಿಕ ಸ್ಥಳೀಯ ಈಜುಗಾರ ಯುವಕರಾದ ನಿಸಾರ್ ಎ ಕೆ ರೋಡ್ ಹಾಗೂ ಇಬ್ರಾಹಿಂ ಎಂ ಕೆ ರೋಡ್ ಅವರ ನೇತೃತ್ವದ ತಂಡ ಮೃತದೇಹ ನದಿಯಿಂದ ಮೇಲಕ್ಕೆತ್ತಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೃತರ ಸಹೋದರಿ ಶ್ರೀಮತಿ ಭಾರತಿ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

















0 comments:
Post a Comment