ಮಂಗಳೂರು, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಇದರ ವತಿಯಿಂದ ಕನ್ನಡ ಮನಸ್ಸುಗಳ ಬೃಹತ್ ಸಂಗಮ “ರಾಜ್ಯ ಸಮಾವೇಶ-2026” ಅಭಿಯಾನದ 75ರ ಸಂಭ್ರಮವು ಫೆಬ್ರವರಿ 11 ರಂದು ಮಧ್ಯಾಹ್ನ 2 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ.
ರಾಜ್ಯ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಫರೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ವಿರೋಧ ಪಕ್ಷದ ನಾಯಕ ದೀಪ ಪ್ರಜ್ವಲನೆ ನಡೆಸುವರು. ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ಭಿನ್ನ ಚೇತನ ಮಕ್ಕಳಿಗೆ ವ್ಹೀಲ್ ಚೆಯರ್ ವಿತರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡುವರು. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ವೇದವ್ಯಾಸ ಕಾಮತ್ ಗುರುವಂದನೆ ನಡೆಸುವರು.
ಕಾರ್ಯಕ್ರಮದಲ್ಲಿ ಪದಗ್ರಹಣ ಸಂಭ್ರಮ, ಗುರುವಂದನೆ, ಭಿನ್ನಚೇತನ ವಿದ್ಯಾರ್ಥಿಗಳಿಗೆ ವ್ಹೀಲ್ ಚೆಯರ್ ಹಸ್ತಾಂತರ, ಪ್ರತಿಭಾ ಪುರಸ್ಕಾರ, ಶ್ರವಣ ಯಂತ್ರ ವಿತರಣೆ, ನೃತ್ಯ ಸಂಭ್ರಮ ಹಾಗೂ ಕನ್ನಡ ರತ್ನ ಪ್ರಶಸ್ತಿ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.














0 comments:
Post a Comment