ಇಡ್ಕಿದು, ಕುಳ ವಲಯ ಕಾಂಗ್ರೆಸ್ ವತಿಯಿಂದ “ನರೇಗಾ ಬಚಾವೋ ಸಂಗ್ರಾಮ” - Karavali Times ಇಡ್ಕಿದು, ಕುಳ ವಲಯ ಕಾಂಗ್ರೆಸ್ ವತಿಯಿಂದ “ನರೇಗಾ ಬಚಾವೋ ಸಂಗ್ರಾಮ” - Karavali Times

728x90

2 February 2026

ಇಡ್ಕಿದು, ಕುಳ ವಲಯ ಕಾಂಗ್ರೆಸ್ ವತಿಯಿಂದ “ನರೇಗಾ ಬಚಾವೋ ಸಂಗ್ರಾಮ”

ಬಂಟ್ವಾಳ, ಫೆಬ್ರವರಿ 03, 2026 (ಕರಾವಳಿ ಟೈಮ್ಸ್) : ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರವು ಯುಪಿಎ ಸರಕಾರದ ಮಹತ್ವಕಾಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪ ಬದಲಾಯಿಸಲು ಹೊರಟು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರನ್ನು ಮರೆಮಾಚಾಲು ಹಾಗೂ, ಬಡ ಕೃಷಿ ಕೂಲಿ ಕಾರ್ಮಿಕರ ಹೊಟ್ಟೆಗೆ ಹೊಡೆಯಲು ಮುಂದಾಗಿರುವುದನ್ನು ವಿರೋಧಿಸಿ ಇಡ್ಕಿದು, ಕುಳ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಇಡ್ಕಿದು ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. 

ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ರಾಷ್ಟ್ರೀಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ರಾಜ್ಯ ಉಪಾಧ್ಯಕ್ಷ ಸಿದ್ದೀಕ್ ಸೂರ್ಯ, ವಿಟ್ಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿಗಳಾದ ಇಸ್ಮಾಯಿಲ್ ಕಾರ್ಯಾಡಿ, ಫಾರೂಕ್ ಮಿತ್ತೂರು, ಶಾಫಿ ಸೂರ್ಯ, ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಕೋಲ್ಪೆ, ಕುಳ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಳಕೆಮಜಲು, ಬೂತ್ ಅಧ್ಯಕ್ಷರುಗಳಾದ ಹಂಝ ಕಂದಕ್ ಮಿತ್ತೂರು, ಅಬ್ದುಲ್ ಲತೀಫ್ ದಲ್ಕಾಜೆ, ಬಾಲಕೃಷ್ಣ ಪೂಜಾರಿ ಪೆಳತ್ತಾಡಿ, ಅಶ್ರಫ್ ಕೆಜಿಎನ್, ಇಕ್ಬಾಲ್ ಕಸ್ತೂರಿ, ಪ್ರಮುಖರಾದ ಸಾದಿಕ್ ಅಕ್ಕರೆ ಮಿತ್ತೂರು, ಅಬೂಬಕ್ಕರ್ ಗೋಡನ್, ಚೇತನ್ ಗೌಡ ಉರಿಮಜಲು, ಹಂಝ ಕಾರ್ಯಾಡಿ, ಲತೀಫ್ ಕಾರ್ಯಾಡಿ, ಇಬ್ರಾಹಿಂ ಮಿತ್ತೂರು, ಶಾಕಿರ್ ಅಳಕೆಮಜಲು, ಸುಕೇಶ್ ಕುಳ, ಟಿ ಮೊಹಮ್ಮದ್ ಕಾರ್ಯಾಡಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಇಡ್ಕಿದು, ಕುಳ ವಲಯ ಕಾಂಗ್ರೆಸ್ ವತಿಯಿಂದ “ನರೇಗಾ ಬಚಾವೋ ಸಂಗ್ರಾಮ” Rating: 5 Reviewed By: karavali Times
Scroll to Top