ವೆನ್ಲಾಕ್ ಆಸ್ಪತ್ರೆಯೆ ಡಿಸ್ಟ್ರಿಕ್ಟ್ ಸರ್ಜನ್ ಹುದ್ದೆ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿ ಮೇಲ್ದಜೆಗೆ : ದಿನೇಶ್ ಗುಂಡೂರಾವ್ ಆದೇಶ - Karavali Times ವೆನ್ಲಾಕ್ ಆಸ್ಪತ್ರೆಯೆ ಡಿಸ್ಟ್ರಿಕ್ಟ್ ಸರ್ಜನ್ ಹುದ್ದೆ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿ ಮೇಲ್ದಜೆಗೆ : ದಿನೇಶ್ ಗುಂಡೂರಾವ್ ಆದೇಶ - Karavali Times

728x90

2 February 2026

ವೆನ್ಲಾಕ್ ಆಸ್ಪತ್ರೆಯೆ ಡಿಸ್ಟ್ರಿಕ್ಟ್ ಸರ್ಜನ್ ಹುದ್ದೆ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿ ಮೇಲ್ದಜೆಗೆ : ದಿನೇಶ್ ಗುಂಡೂರಾವ್ ಆದೇಶ

ಮಂಗಳೂರು, ಫೆಬ್ರವರಿ 03, 2026 (ಕರಾವಳಿ ಟೈಮ್ಸ್) : ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಮತ್ತಷ್ಟು ಸುಸಜ್ಜಿತಗೊಳಿಸಲು 70 ಕೋಟಿಯಷ್ಟು ಅನುದಾನವನ್ನು ನೀಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಮೊದಲ ಹಂತವಾಗಿ ಈಗಾಗಲೇ 35 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದೆ. ಹಾಗೆಯೇ ಕೆಎಂಸಿಯೊಂದಿಗೆ ಸುಮಾರು 100 ಕೋಟಿ ಮೊತ್ತದ ಅನುದಾನ ಪಡೆಯಲು ಚರ್ಚೆ ನಡೆಸಲಾಗಿದ್ದು, ಸದ್ಯದಲ್ಲಿಯೇ ಆ ಯೋಜನೆಯೂ ಕಾರ್ಯರೂಪಕ್ಕೆ ಬರಲಿದೆ. ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಸದೃಢ ಆಡಳಿತ ವ್ಯವಸ್ಥೆಗಾಗಿ ಪ್ರಸ್ತುತ ಇರುವ ಡಿಸ್ಟ್ರಿಕ್ಟ್ ಸರ್ಜನ್ (ಮುಖ್ಯ ವೈದ್ಯರ) ಹುದ್ದೆಯನ್ನು ಮೆಡಿಕಲ್ ಸೂಪರಿಂಟೆಂಡೆಂಟ್ ಹುದ್ದೆಯಾಗಿ ಮೇಲ್ದರ್ಜೆಗೆ ಏರಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ ಮಾಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ವೆನ್ಲಾಕ್ ಆಸ್ಪತ್ರೆಯೆ ಡಿಸ್ಟ್ರಿಕ್ಟ್ ಸರ್ಜನ್ ಹುದ್ದೆ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿ ಮೇಲ್ದಜೆಗೆ : ದಿನೇಶ್ ಗುಂಡೂರಾವ್ ಆದೇಶ Rating: 5 Reviewed By: karavali Times
Scroll to Top