ಕುದ್ರೆಬೆಟ್ಟು : ರಿಕ್ಷಾ-ಸ್ಕೂಟರ್ ನಡುವಿನ ಅಪಘಾತದಲ್ಲಿ ನಾಲ್ವರಿಗೆ ಗಾಯ - Karavali Times ಕುದ್ರೆಬೆಟ್ಟು : ರಿಕ್ಷಾ-ಸ್ಕೂಟರ್ ನಡುವಿನ ಅಪಘಾತದಲ್ಲಿ ನಾಲ್ವರಿಗೆ ಗಾಯ - Karavali Times

728x90

5 February 2026

ಕುದ್ರೆಬೆಟ್ಟು : ರಿಕ್ಷಾ-ಸ್ಕೂಟರ್ ನಡುವಿನ ಅಪಘಾತದಲ್ಲಿ ನಾಲ್ವರಿಗೆ ಗಾಯ

ಬಂಟ್ವಾಳ, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಫೆಬ್ರವರಿ 4 ರಂದು ಸಂಭವಿಸಿದೆ. 

ಗಾಯಗೊಂಡವರನ್ನು ಅಟೋ ರಿಕ್ಷಾ ಚಾಲಕ ಇಡ್ಕಿದು ಗ್ರಾಮದ ಕೋಲ್ಪೆ-ವಡ್ಡರ್ಪೆ ನಿವಾಸಿ ಸವಾದ್ (30), ಪ್ರಯಾಣಿಕರಾದ ನೆರೆಕರೆ ನಿವಾಸಿಗಳಾದ ಹವ್ವಮ್ಮ ಅವರ ಪುತ್ರಿ ಸುಹೈಲಾ ಹಾಗೂ ಸ್ಕೂಟರ್ ಸವಾರ ಸಂಜೀವ ಶೆಟ್ಟಿ ಎಂದು ಹೆಸರಿಸಲಾಗಿದೆ. 

ಅಟೋ ಚಾಲಕ ಸವಾದ್ ಅವರು ಫೆಬ್ರವರಿ 4 ರಂದು ತಮ್ಮ ನೆರೆಕರೆ ನಿವಾಸಿಗಳಾದ ಹವ್ವಮ್ಮ ಹಾಗೂ ಅವರ ಪುತ್ರಿ ಸುಹೈಲ ಅವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಹವ್ವಮ್ಮ ಅವರ ಚಿಕಿತ್ಸೆಗಾಗಿ ಪುತ್ತೂರು ಸಾರ್ವಜನಿಕ ಆಸ್ಪತ್ರೆಯಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಿ ಸಿ ರೋಡು ಕಡೆಗೆ ಬರುತ್ತಿದ್ದ ವೇಳೆ ಬೆಳಿಗ್ಗೆ ಸುಮಾರು 11.40 ರ ವೇಳೆಗೆ ಬಾಳ್ತಿಲ ಗ್ರಾಮದ ಕುದುರೆಬೆಟ್ಟು ಎಂಬಲ್ಲಿ ತಲುಪುತ್ತಿದ್ದಂತೆ ಹೆದ್ದಾರಿ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಕಲ್ಲಡ್ಕ ಕಡೆಯಿಂದ ಸಂಜೀವ ಶೆಟ್ಟಿ ಅವರು ಸವಾರಿ ಮಾಡಿಕೊಂಡು ಬಂದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ಹೆದ್ದಾರಿಯಲ್ಲಿ ಮಗುಚಿ ಬಿದ್ದಿದೆ. ಅಪಘಾತದಿಂದ ಅಟೋ ಚಾಲಕ, ಪ್ರಯಾಣಿಕರು ಹಾಗೂ ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ. ಗಾಯಗೊಂಡ ಸುಹೈಲ ಮತ್ತು ಹವ್ವಮ್ಮ ಅವರನ್ನು ತುಂಬೆ ಪಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಟೋ ಚಾಲಕ ಹಾಗೂ ಸ್ಕೂಟರ್ ಸವಾರನನ್ನು ಕಲ್ಲಡ್ಕ ಪುಷ್ಪರಾಜ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಸ್ಕೂಟರ್ ಸವಾರನ ದುಡುಕುತನ ಹಾಗೂ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕುದ್ರೆಬೆಟ್ಟು : ರಿಕ್ಷಾ-ಸ್ಕೂಟರ್ ನಡುವಿನ ಅಪಘಾತದಲ್ಲಿ ನಾಲ್ವರಿಗೆ ಗಾಯ Rating: 5 Reviewed By: karavali Times
Scroll to Top