ಬಂಟ್ವಾಳ, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಇನ್ನೋವಾರ ಕಾರು ಚಾಲಕರಿಬ್ಬರು ಗಾಯಗೊಂಡ ಘಟನೆ ಮಾಣಿ ಫ್ಲೈ ಓವರ್ ಮೇಲೆ ಜನವರಿ 30 ರಂದು ರಾತ್ರಿ ಸಂಭವಿಸಿದೆ.
ಗಾಯಗೊಂಡವರನ್ನು ಇನ್ನೋವಾ ಕಾರು ಚಾಲಕ ಪ್ರವೀಣ ಹಾಗೂ ಪ್ರಯಾಣಿಕ ಚಂದ್ರಹಾಸ ಎಂದು ಹೆಸರಿಸಲಾಗಿದೆ. ತಮಿಳ್ನಾಡು ಮೂಲದ ಎಸ್ ಜಲಾಬುದ್ದೀನ್ (53) ಅವರು ಲಾರಿಯಲ್ಲಿ ಬೆಂಗಳೂರಿನಿಂದ ಉಡುಪಿಗೆ ಸರಕು ಸಾಗಾಟದ ಬಗ್ಗೆ ಹೊರಟು ಜನವರಿ 30 ರಂದು ರಾತ್ರಿ ವೇಳೆ ಮಾಣಿ ಗ್ರಾಮದ ಮಾಣಿ ಪ್ಲೈ ಓವರ್ ಮೇಲೆ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಕಾರಿನೊಳಗೆ ಸಿಲುಕಿದ್ದವರನ್ನು ತಕ್ಷಣ ಹೊರ ತೆಗೆದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment