ಮಂಗಿಲಪದವು : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಆಸ್ಪತ್ರೆಗೆ - Karavali Times ಮಂಗಿಲಪದವು : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಆಸ್ಪತ್ರೆಗೆ - Karavali Times

728x90

2 February 2026

ಮಂಗಿಲಪದವು : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಆಸ್ಪತ್ರೆಗೆ

ಬಂಟ್ವಾಳ, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಮಂಗಿಲಪದವು ಎಂಬಲ್ಲಿ ಜನವರಿ 20 ರಂದು ಸಂಭವಿಸಿದೆ. 

ಗಾಯಗೊಂಡ ವ್ಯಕ್ತಿಯನ್ನು ಪುರುಷೋತ್ತಮ ಆಚಾರ್ಯ ಎಂದು ಹೆಸರಿಸಲಾಗಿದೆ. ಇವರು ವಾಹನವೊಂದರಲ್ಲಿ ಬಂದು ಮಂಗಳಪದವಿನಲ್ಲಿ ಇಳಿದು ಅನಂತಾಡಿ ರಸ್ತೆ ಕಡೆಗೆ ದಾಟುತ್ತಿದ್ದ ವೇಳೆ ಕಲ್ಲಡ್ಕ ಕಡೆಯಿಂದ ಜಯಪ್ರಕಾಶ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. 

ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದ ಪುರುಷೋತ್ತಮ ಅವರ ತಲೆ, ಕುತ್ತಿಗೆ, ಕಿವಿಗಳಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಇವರ ಪರಿಚಯದ ರಘುನಾಥ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಿಲಪದವು : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಆಸ್ಪತ್ರೆಗೆ Rating: 5 Reviewed By: karavali Times
Scroll to Top