ಮ್ಯಾಟ್ರಿಮೋನಿ ಆನ್ ಲೈನ್ ಫ್ಲ್ಯಾಟ್ ಫಾರಂ ಮೂಲಕ ಹಲವು ಮಹಿಳೆಗೆ ವಂಚಿಸುತ್ತಿದ್ದ ಕುಖ್ಯಾತ ಖದೀಮ ಹಾಗೂ ಆತನಿಗೆ ಸಹಕರಿಸುತ್ತಿದ್ದಾತ ಕಾವೂರು ಪೊಲೀಸರ ಬಲೆಗೆ - Karavali Times ಮ್ಯಾಟ್ರಿಮೋನಿ ಆನ್ ಲೈನ್ ಫ್ಲ್ಯಾಟ್ ಫಾರಂ ಮೂಲಕ ಹಲವು ಮಹಿಳೆಗೆ ವಂಚಿಸುತ್ತಿದ್ದ ಕುಖ್ಯಾತ ಖದೀಮ ಹಾಗೂ ಆತನಿಗೆ ಸಹಕರಿಸುತ್ತಿದ್ದಾತ ಕಾವೂರು ಪೊಲೀಸರ ಬಲೆಗೆ - Karavali Times

728x90

10 February 2026

ಮ್ಯಾಟ್ರಿಮೋನಿ ಆನ್ ಲೈನ್ ಫ್ಲ್ಯಾಟ್ ಫಾರಂ ಮೂಲಕ ಹಲವು ಮಹಿಳೆಗೆ ವಂಚಿಸುತ್ತಿದ್ದ ಕುಖ್ಯಾತ ಖದೀಮ ಹಾಗೂ ಆತನಿಗೆ ಸಹಕರಿಸುತ್ತಿದ್ದಾತ ಕಾವೂರು ಪೊಲೀಸರ ಬಲೆಗೆ

 ಮಂಗಳೂರು, ಫೆಬ್ರವರಿ 10, 2026 (ಕರಾವಳಿ ಟೈಮ್ಸ್) : ಮ್ಯಾಟ್ರಿಮೋನಿ ಆನ್ ಲೈನ್ ಫ್ಲ್ಯಾಟ್ ಫಾರಂ ಮೂಲಕ ಪರಿಚಯಿಸಿಕೊಂಡು ಹಲವು ಮಂದಿ ಮಹಿಳೆಯರಿಗೆ ವಂಚಿಸುತ್ತಿದ್ದ ಕುಖ್ಯಾತ ಆರೋಪಿಯನ್ನು ಹಾಗೂ ಆತನಿಗೆ ಸಹಕರಿಸುತ್ತಿದ್ದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಕುಖ್ಯಾತ ವಂಚಕನನ್ನು ಸುಶಾಂತ್ ಪೂಜಾರಿ ಅಲಿಯಾಸ್ ಸುಶಾಂತ್ ಅಂಕುಶ್ ಪೂಜಾರಿ ಅಲಿಯಾಸ್ ಸುಶಾಂತ್ ಜಿ ಕರ್ಕೇರ (32) ಹಾಗೂ ಆತನಿಗೆ ಸಹಕರಿಸಿದಾತನನ್ನು ಮುಲ್ಕಿ ನಿವಾಸಿ ಭಾಸ್ಕರ್ ಎಂದು ಹೆಸರಿಸಲಾಗಿದೆ. 

ಮಹಿಳೆಯೋರ್ವರಿಗೆ ಸುಶಾಂತ್ ಪೂಜಾರಿ ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈಯಲ್ಲಿ 2025 ರ ಫೆಬ್ರವರಿ 2 ರಂದು ಮದುವೆಯಾಗಿದ್ದಲ್ಲದೆ ನಂಬಿಸಿ ಹಂತ ಹಂತವಾಗಿ 6.60 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು ಮೋಸ ಮಾಡುವ ಉದ್ದೇಶದಿಂದ 2025 ರ ನವೆಂಬರ್ 15 ರಂದು ನಾಪತ್ತೆಯಾಗಿರುತ್ತಾನೆ. 

ನಂತರದ ದಿನಗಳಲ್ಲಿ ಮಹಿಳೆ ಅನುಮಾನಗೊಂಡ ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಸುಮಾರು ಕಡೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಮೋಸ ಮಾಡಿರುವ  ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದ ಮೇರೆಗೆ ನೊಂದ ಮಹಿಳೆಯು ಕಾವೂರು ಪೆÇಲೀಸು ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 184/2025 ಕಲಂ 318(4), 316(2), 316(1), 336(3), 340(1) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ಆರೋಪಿ ಸುಶಾಂತ್ ಪೂಜಾರಿಯನ್ನು ಫೆಬ್ರವರಿ 5 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಈತ ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಈ ಮೊದಲು 2021 ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುತ್ತಾನೆ. ಹಾಗೂ ಉಡುಪಿಯ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ  ಹಣ ಪಡೆದುಕೊಂಡಿರುತ್ತಾನೆ, ಮುಂಬೈಯ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುತ್ತಾನೆ. ಬೆಂಗಳೂರಿನಲ್ಲಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುತ್ತಾನೆ ಕಾರ್ಕಳದ ಒಂದು ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸದ್ರಿ  ಪ್ರಕರಣದಲ್ಲಿ ಆರೋಪಿ ಸುಶಾಂತ್ ಪೂಜಾರಿಯೊಂದಿಗೆ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತ ಮಹಿಳೆಗೆ ಮತ್ತು ಕುಟುಂಬದವರಿಗೆ ನಂಬಿಸುವ ಉದ್ದೇಶದಿಂದ ಆರೋಪಿ ಸುಶಾಂತ್ ನನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿ ಆರೋಪಿತ ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬೈಯಲ್ಲಿ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡು ಮದುವೆ ನಡೆಸಿದವರಾಗಿರುತ್ತಾನೆ. ಈತನನ್ನೂ ಕೂಡಾ ದಸ್ತಗಿರಿ ಮಾಡಿ  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

ಆರೋಪಿ ಸುಶಾಂತ್ ಪೂಜಾರಿ ವಿರುದ್ದ ಮಂಗಳೂರು ಉರ್ವಾ ಪೆÇಲೀಸ್ ಠಾಣೆ, ಉಡುಪಿ ಜಿಲ್ಲೆಯ  ಕೋಟಾ ಪೆÇಲೀಸ್ ಠಾಣೆ, ಮತ್ತು ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮ್ಯಾಟ್ರಿಮೋನಿ ಆನ್ ಲೈನ್ ಫ್ಲ್ಯಾಟ್ ಫಾರಂ ಮೂಲಕ ಹಲವು ಮಹಿಳೆಗೆ ವಂಚಿಸುತ್ತಿದ್ದ ಕುಖ್ಯಾತ ಖದೀಮ ಹಾಗೂ ಆತನಿಗೆ ಸಹಕರಿಸುತ್ತಿದ್ದಾತ ಕಾವೂರು ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top