ಕಳ್ಳಿಗೆ ಗ್ರಾಮದ ಜಲ್ ಅರ್ಪಣ್ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್ - Karavali Times ಕಳ್ಳಿಗೆ ಗ್ರಾಮದ ಜಲ್ ಅರ್ಪಣ್ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್ - Karavali Times

728x90

10 February 2026

ಕಳ್ಳಿಗೆ ಗ್ರಾಮದ ಜಲ್ ಅರ್ಪಣ್ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್

ಬಂಟ್ವಾಳ, ಫೆಬ್ರವರಿ 10, 2026 (ಕರಾವಳಿ ಟೈಮ್ಸ್) : ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಯಡಿ ಕಳ್ಳಿಗೆ ಗ್ರಾಮಕ್ಕೆ 24*7 ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಕಳ್ಳಿಗೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ಜಲ್ ಅರ್ಪಣ್ ದಿವಸ್ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಫೆ 10 ರಂದು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕರು, ಜೀವಜಲ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಸುಮಾರು 1.80 ಕೋಟಿ ಅನುದಾನದಲ್ಲಿ ಕಳ್ಳಿಗೆ ಗ್ರಾಮದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ನೀರನ್ನು ಮಿತವಾಗಿ ಬಳಸೋಣ. ಗ್ರಾಮೀಣ ಭಾಗದ ಪ್ರತೀ ಮನೆಮನೆಗೂ ನಿರಂತರ ಕುಡಿಯುವ ನೀರು ಪೂರೈಸುವುದು ಯೋಜನೆಯ ಉದ್ದೇಶವಾಗಿದೆ ಎಂದರು. 

ಕಳ್ಳಿಗೆ ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಟೇಶ್, ಕಿರಿಯ ಅಭಿಯಂತರ ಜಗದೀಶ್, ಪಂಚಾಯತ್ ಪಿಡಿಒ ಚಂದ್ರಾವತಿ, ಕಳ್ಳಿಗೆ ಗ್ರಾ ಪಂ ಮಾಜಿ ಅಧ್ಯಕ್ಷೆ ಯಶೋಧಾ ಜಾರಂದಗುಡ್ಡೆ, ಮಾಜಿ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಸದಸ್ಯರಾದ ಮನೋಜ್ ವಳವೂರು, ರೇಶ್ಮಾ ಬೆಂಜನಪದವು, ಪ್ರಮುಖರಾದ ಸತೀಶ್ ಮಾಡಂಗೆ, ಪುಷ್ಪಾ ಬಂಜನ್ ದರಿಬಾಗಿಲು, ಓಮಯ್ಯ ಜೆ ಕೋಟ್ಯಾನ್ ಕನಪಾಡಿ, ಸಂಜೀವ ಬೆದ್ರಾಡಿ, ಸಂತೋಷ್ ಬ್ರಹ್ಮರಕೂಟ್ಲು, ಮಾಧವ ಬ್ರಹ್ಮರಕೂಟ್ಲು, ಯೋಗೀಶ್ ದರಿಬಾಗಿಲು, ಗಿರೀಶ್ ಚಂದ್ರಿಗೆ, ದಿನಕರ ಚಂದ್ರಿಗೆ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕಳ್ಳಿಗೆ ಗ್ರಾಮದ ಜಲ್ ಅರ್ಪಣ್ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್ Rating: 5 Reviewed By: karavali Times
Scroll to Top