ಮಾದಕ ವಸ್ತು ಸೇವಿಸಿ ಅನುಮಾನಸ್ಪದ ವರ್ತಿಸುತ್ತಿದ್ದ ಯುವಕ ಬಂಟ್ವಾಳ ನಗರ ಪೊಲೀಸರ ಬಲೆಗೆ - Karavali Times ಮಾದಕ ವಸ್ತು ಸೇವಿಸಿ ಅನುಮಾನಸ್ಪದ ವರ್ತಿಸುತ್ತಿದ್ದ ಯುವಕ ಬಂಟ್ವಾಳ ನಗರ ಪೊಲೀಸರ ಬಲೆಗೆ - Karavali Times

728x90

4 February 2026

ಮಾದಕ ವಸ್ತು ಸೇವಿಸಿ ಅನುಮಾನಸ್ಪದ ವರ್ತಿಸುತ್ತಿದ್ದ ಯುವಕ ಬಂಟ್ವಾಳ ನಗರ ಪೊಲೀಸರ ಬಲೆಗೆ

ಬಂಟ್ವಾಳ, ಫೆಬ್ರವರಿ 04, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವನೆ ಮಾಡಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನೋರ್ವನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ಬಿ ಸಿ ರೋಡು ಸಮೀಪದ ಸ್ಪರ್ಶಾ ಕಲಾ ಮಂದಿರ ಬಳಿಯ ಮೈದಾನದಲ್ಲಿ ಫೆಬ್ರವರಿ 3 ರಂದು ಸಂಭವಿಸಿದೆ. 

ಬಂಧಿತ ಆರೋಪಿಯನ್ನು ಪುದು ಗ್ರಾಮದ ನಿವಾಸಿ ಮಹಮ್ಮದ್ ಬಾತಿಷ್ (33) ಎಂದು ಹೆಸರಿಸಲಾಗಿದೆ. ಈತ ಬಿ ಮೂಡ ಗ್ರಾಮದ ಬಿ ಸಿ ರೋಡು ಸ್ಪರ್ಶಾ ಕಲಾ ಮಂದಿರದ ಮುಂಭಾಗದ ಮೈದಾನದಲ್ಲಿ ಅನುಮಾನಾಸ್ಪದವಾಗಿ, ಅಮಲು ಪದಾರ್ಥ ಸೇವನೆ ಮಾಡಿದ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಬಂಟ್ವಾಳ ನಗರ ಪೆÇಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ನೇತೃತ್ವದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಆತನನ್ನು ಪೊಲೀಸರು ವಿಚಾರಿಸಿದಾಗ ಆತ ಮಾದಕ ದ್ರವ್ಯ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ. ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತ ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಆತನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾದಕ ವಸ್ತು ಸೇವಿಸಿ ಅನುಮಾನಸ್ಪದ ವರ್ತಿಸುತ್ತಿದ್ದ ಯುವಕ ಬಂಟ್ವಾಳ ನಗರ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top