ಅವಧಿ ಮುಗಿಸಿದ ನೆಟ್ಲಮುಡ್ನೂರು ಪಂಚಾಯತ್ ಸದಸ್ಯರಿಗೆ ಬೀಳ್ಕೊಡುಗೆ, ಅಭಿನಂದನೆ - Karavali Times ಅವಧಿ ಮುಗಿಸಿದ ನೆಟ್ಲಮುಡ್ನೂರು ಪಂಚಾಯತ್ ಸದಸ್ಯರಿಗೆ ಬೀಳ್ಕೊಡುಗೆ, ಅಭಿನಂದನೆ - Karavali Times

728x90

12 February 2026

ಅವಧಿ ಮುಗಿಸಿದ ನೆಟ್ಲಮುಡ್ನೂರು ಪಂಚಾಯತ್ ಸದಸ್ಯರಿಗೆ ಬೀಳ್ಕೊಡುಗೆ, ಅಭಿನಂದನೆ

ಬಂಟ್ವಾಳ, ಫೆಬ್ರವರಿ 12, 2026 (ಕರಾವಳಿ ಟೈಮ್ಸ್) : ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳ ವತಿಯಿಂದ 2021-26ನೇ ಸಾಲಿನ ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಅವರು, ಪಂಚಾಯತಿಗೆ ಬಂದಂತಹ ಅನುದಾನಗಳನ್ನು ಸದಸ್ಯರು ತಮ್ಮ ವಾರ್ಡುಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಸದಾ ಕ್ರಿಯಾಶೀಲರಾಗಿ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. 

ಗೌರವಾರ್ಪಣೆ ಸ್ವೀಕರಿಸಿದ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ ಪೂಜಾರಿ, ಉಪಾಧ್ಯಕ್ಷ ಸಚ್ಚಿದಾನಂದ ಪೂಜಾರಿ, ಸದಸ್ಯರಾದ ಅಬ್ದುಲ್ ಲತೀಫ್, ಶ್ರೀಧರ ರೈ, ಅಶೋಕ್ ರೈ ಮಾತನಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಉತ್ತಮ ಸಹಕಾರ ನೀಡಿದ್ದೀರಿ, ಮುಂದೆಯೂ ನಿಮ್ಮ ಕಾರ್ಯಕ್ಷಮತೆ ಇದೇ ರೀತಿ ಮುಂದುವರಿಯಲಿ, ನಮ್ಮ ಅಧಿಕಾರಾವಧಿಯಲ್ಲಿ ನಿಮ್ಮ ಮನಸ್ಸಿಗೆ ನೋವು ತರುವಂತಹ ವಿಚಾರಗಳು ನಡೆದಿದ್ದಲ್ಲಿ ಕ್ಷಮೆಯಿರಲಿ ಎಂದರು.

ಸದಸ್ಯರಾದ ಧನಂಜಯ ಗೌಡ, ಪ್ರೇಮಾ, ಲಕ್ಷ್ಮೀ, ಶಕೀಲಾ ಕೆ ಪೂಜಾರಿ, ಶಾಲಿನಿ, ಸುಜಾತಾ ಗೌರವ ಅಭಿನಂದನೆ ಸ್ವೀಕರಿಸಿದರು. ಇದೇ ವೇಳೆ ಗ್ರಾಮ ಪಂಚಾಯತಿನ ಶೇಕಡಾ 25 ಮತ್ತು ಶೇಕಡಾ 5 ರ ಫಲಾನುಭವಿಗಳಿಗೆ ಪಂಚಾಯತ್ ಅಧ್ಯಕ್ಷೆ  ಸಮಿತಾ ಡಿ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸೋಲಾರ್ ಲೈಟ್ ಹಾಗೂ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು. ಸಿಬ್ಬಂದಿಗಳಾದ ದೀಪ್ತಿ ಸ್ವಾಗತಿಸಿ, ಸೌಮ್ಯ ವಂದಿಸಿದರು. ಶಶಿಧರ ಹಾಗೂ ಉಪೇಂದ್ರ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಅವಧಿ ಮುಗಿಸಿದ ನೆಟ್ಲಮುಡ್ನೂರು ಪಂಚಾಯತ್ ಸದಸ್ಯರಿಗೆ ಬೀಳ್ಕೊಡುಗೆ, ಅಭಿನಂದನೆ Rating: 5 Reviewed By: karavali Times
Scroll to Top