ಮಂಗಳೂರು, ಫೆಬ್ರವರಿ 10, 2026 (ಕರಾವಳಿ ಟೈಮ್ಸ್) : ಸಂವಿಧಾನದ 10ನೇ ಅನುಸೂಚಿ ಹಾಗೂ ಅದಕ್ಕೆ ಅನುಸಾರವಾಗಿ ರಚಿಸಲಾದ ನಿಯಮಾವಳಿಗಳಡಿಯಲ್ಲಿ ಪೀಠಾಸೀನಾಧಿಕಾರಿಗಳ ಅಧಿಕಾರಗಳನ್ನು ಪರಿಶೀಲಿಸುವ ಉದ್ದೇಶದಿಂದ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರನ್ನು ಸಮಿತಿ ಸದಸ್ಯರಾಗಿ ನೇಮಿಸುವ ಮೂಲಕ ಪೀಠಾಸೀನಾಧಿಕಾರಿಗಳ ಸಮಿತಿ ರಚಿಸಿರುತ್ತಾರೆ. ಸಮಿತಿಯ ಸಭೆಯು ಮಹಾರಾಷ್ಟ್ರ ವಿಧಾನಸಭೆ ಮುಂಬೈಯಲ್ಲಿ ನಡೆಯಿತು.
ಸಮಿತಿಯಲ್ಲಿ ಮಹಾರಾಷ್ಟ್ರ ವಿಧಾನಸಭೆ ಸಭಾಧ್ಯಕ್ಷ ರಾಹುಲ್ ನಾರ್ವೇಕರ್ (ಅಧ್ಯಕ್ಷರು), ಒಡಿಸ್ಸಾ ವಿಧಾನಸಭೆ ಸಭಾಧ್ಯಕ್ಷೆ ಸುರಮ ಪಾದಿ (ಸದಸ್ಯರು), ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ (ಸದಸ್ಯರು), ನಾಗಲ್ಯಾಂಡ್ ವಿಧಾನಸಭೆ ಸಭಾಧ್ಯಕ್ಷ ಷರಿಂಗೈನ್ ಲಾಂಗ್‍ಕುಮೆರ್ (ಸದಸ್ಯರು) ಇದ್ದಾರೆ.













0 comments:
Post a Comment