ಪಾಣೆಮಂಗಳೂರು ಕುಡಿಯುವ ನೀರಿನ ಪೈಪ್ ದುರಸ್ತಿಗೆ ಕ್ರಮ ಕೈಗೊಂಡ ಪುರಸಭಾ ಮುಖ್ಯಾಧಿಕಾರಿ - Karavali Times ಪಾಣೆಮಂಗಳೂರು ಕುಡಿಯುವ ನೀರಿನ ಪೈಪ್ ದುರಸ್ತಿಗೆ ಕ್ರಮ ಕೈಗೊಂಡ ಪುರಸಭಾ ಮುಖ್ಯಾಧಿಕಾರಿ - Karavali Times

728x90

25 February 2026

ಪಾಣೆಮಂಗಳೂರು ಕುಡಿಯುವ ನೀರಿನ ಪೈಪ್ ದುರಸ್ತಿಗೆ ಕ್ರಮ ಕೈಗೊಂಡ ಪುರಸಭಾ ಮುಖ್ಯಾಧಿಕಾರಿ

ಬಂಟ್ವಾಳ, ಫೆಬ್ರವರಿ 26, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಕೆನರಾ ಬ್ಯಾಂಕ್ ಬಳಿಯ ಕುಡಿಯುವ ನೀರಿನ ಪೈಪ್ ಒಡೆದು ತಿಂಗಳು ಕಳೆದರೂ ದುರಸ್ತಿಯಾಗದೆ ಕೃತಕ ನೆರೆ ಪರಿಸ್ಥಿತಿ ಉಂಟಾದ ಬಗ್ಗೆ ಪತ್ರಿಕೆ ಮಂಗಳವಾರ ಸಚಿತ್ರ ವರದಿ ಪ್ರಕಟಿಸಿದ ಬಗ್ಗೆ ತಕ್ಷಣ ಸ್ಪಂದಿಸಿದ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಬುಧವಾರವೇ ಪೈಪ್ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ.

ಇಲ್ಲಿನ ಪೈಪ್ ಒಡೆದು ತಿಂಗಳಿಗೂ ಅಧಿಕ ಕಾಲ ನೀರು ಪೆÇೀಲಾಗುತ್ತಿದ್ದ ಪರಿಣಾಮ ಪರಿಸರದಲ್ಲಿ ಕೃತಕ ನೆರೆ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಇಲ್ಲಿನ ಶಾಲೆ, ಅಂಗನವಾಡಿ, ಹಾಸ್ಟೆಲ್, ದೇವಸ್ಥಾನ ಮೊದಲಾದೆಡೆಗೆ ಬರುವವರು ತೀವ್ರ ಸಂಕಷ್ಟ ಎದುರಿಸುತ್ತಿದ್ದ ಬಗ್ಗೆ ಪತ್ರಿಕೆ ಸಮಗ್ರ ಹಾಗೂ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.

ವರದಿಗೆ ತಕ್ಷಣ ಸ್ಪಂದಿಸಿದ ಮುಖ್ಯಾಧಿಕಾರಿ ಅವರು ಬುಧವಾರವೇ ಪುರಸಭಾ ಪೌರ ಕಾರ್ಮಿಕರ ಮೂಲಕ ಜೆಸಿಬಿ ಬಳಸಿ ಪೈಪ್ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು ಕುಡಿಯುವ ನೀರಿನ ಪೈಪ್ ದುರಸ್ತಿಗೆ ಕ್ರಮ ಕೈಗೊಂಡ ಪುರಸಭಾ ಮುಖ್ಯಾಧಿಕಾರಿ Rating: 5 Reviewed By: karavali Times
Scroll to Top