ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ, ಅಪಾಯಕಾರಿ ಮರಗಳ, ವಿದ್ಯುತ್ ಕಂಬ, ತಂತಿಗಳ ತೆರವು, ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರಿಗೆ ಸ್ಪಂದನಾ ಮನೋಭಾವದ ಕಾರ್ಯನಿರ್ವಹಣೆ : ಪುದು ಗ್ರಾ.ಪಂ. ಕೆಡಿಪಿ ಸಭೆಯ ಪ್ರಮುಖ ಅಂಶಗಳು - Karavali Times ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ, ಅಪಾಯಕಾರಿ ಮರಗಳ, ವಿದ್ಯುತ್ ಕಂಬ, ತಂತಿಗಳ ತೆರವು, ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರಿಗೆ ಸ್ಪಂದನಾ ಮನೋಭಾವದ ಕಾರ್ಯನಿರ್ವಹಣೆ : ಪುದು ಗ್ರಾ.ಪಂ. ಕೆಡಿಪಿ ಸಭೆಯ ಪ್ರಮುಖ ಅಂಶಗಳು - Karavali Times

728x90

16 February 2026

ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ, ಅಪಾಯಕಾರಿ ಮರಗಳ, ವಿದ್ಯುತ್ ಕಂಬ, ತಂತಿಗಳ ತೆರವು, ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರಿಗೆ ಸ್ಪಂದನಾ ಮನೋಭಾವದ ಕಾರ್ಯನಿರ್ವಹಣೆ : ಪುದು ಗ್ರಾ.ಪಂ. ಕೆಡಿಪಿ ಸಭೆಯ ಪ್ರಮುಖ ಅಂಶಗಳು

ಬಂಟ್ವಾಳ, ಫೆಬ್ರವರಿ 16, 2026 (ಕರಾವಳಿ ಟೈಮ್ಸ್) : ಪುದು ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ, ಬೀಳುವ ಹಂತದಲ್ಲಿರುವ ಮರಗಳ ತೆರವು, ವಿದ್ಯುತ್ ತಂತಿ, ಕಂಬಗಳ ದುರಸ್ತಿ ಹಾಗೂ ಬದಲಾವಣೆ, ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಸೂಚಿಸಬೇಕು ಇದೇ ಮೊದಲಾದ ವಿಷಯಗಳನ್ನು ಕೇಂದ್ರೀಕರಿಸಿಕೊಂಡು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. 

ಮಾರಿಪಳ್ಳ ಸಮೀಪದ ಸುಜೀರು-ಕಾನ ಎಂಬಲ್ಲಿ ಮುರಿದು ಬೀಳುವ ಹಂತದಲ್ಲಿರುವ ಮರ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಅದೇ ರೀತಿಯ ಗ್ರಾಮದ ಹೆದ್ದಾರಿ ಬದಿಯಲ್ಲಿ ಕೂಡಾ ವಾಹನಗಳಿಗೆ ಅಥವಾ ಸಾರ್ವಜನಿಕರಿಗೆ ಅಪಾಯ ತಂದೊಡ್ಡುವ ರೀತಿಯ ಅಪಾಯಕಾರಿ ಮರಗಳಿದ್ದು, ಕೆಲವಡೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳಿಗೂ ಅಪಾಯ ತಂದೊಡ್ಡುವ ಮರಗಳಿದ್ದು, ಅವುಗಳನ್ನು ತೆರವುಗೊಳಿಸಲು ಅಥವಾ ರೆಂಬೆ ಕೊಂಬೆ ಕಡಿದು ಅಪಾಯದಿಂದ ಮುಕ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಯಿತು. 

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾದುರಸ್ತಿಯಲ್ಲಿರುವ ವಿದ್ಯುತ್ ಕಂಬಗಳು ಹಾಗೂ ತಂತಿಗಳನ್ನು ಬದಲಾಯಿಸುವುದು ಅಥವಾ ದುರಸ್ತಿಗೊಳಿಸಿ ಯಾವುದೇ ಅಪಾಯಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಅಧಿಕಾರಿಗೆ ಸೂಚಿಸಲಾಯಿತು. 

ಪುದು ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ನೇಮಕಗೊಳಿಸುವಂತೆ ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಅವರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ 5 ಗ್ರಾಮ ವ್ಯಾಪ್ತಿ ಹೊಂದಿರುವ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಸಭೆ ಕರೆದು ಜನರಿಗೆ ಗರಿಷ್ಠ ಮಟ್ಟದ ಸೇವೆ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗೆ ಸೂಚಿಸಲಾಯಿತು.

ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಎಲ್ಲಾ ಬಿ ಎಲ್ ಒ ಗಳು ಸಾರ್ವಜನಿಕರಿಗೆ ಸಮಪರ್ಕ ಮಾಹಿತಿ ನೀಡಿ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೆ ಸಮಪರ್ಕವಾಗಿ ನಡೆಯುವಂತಾಗಲು ಬೂತ್ ಲೆವೆಲ್ ಅಧಿಕಾರಿಗ ಸಭೆ ಕರೆದು ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಅಂಗನವಾಡಿ ನಿರ್ವಾಹಕಿ ಗುಣವತಿ ಅವರಿಗೆ ಸೂಚಿಸಲಾಯಿತು. ಕೆಲವೆಡೆ ಬಿ ಎಲ್ ಒ ಗಳು ಸಾರ್ವಜನಿಕರೊಂದಿಗೆ ಸ್ಪಂದಿಸುವುದಿಲ್ಲ ಹಾಗೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.  

ಬ್ಯಾಂಕುಗಳ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸ್ಪಂದನಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಭಾಗವಹಿಸಿದ್ದ ಬ್ಯಾಂಕುಗಳ ಮ್ಯಾನೇಜರುಗಳಿಗೆ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಸೂಚಿಸಿದರು. 

ಪುದು ಗ್ರಾಮ ಪಂಚಾಯತಿನ ದ್ವಿತೀಯಾರ್ಧದ ಆಡಳಿತ ಅಧಿಕಾರಕ್ಕೆ ಬಂದ ಬಳಿಕ ನಡೆದ ಪ್ರಥಮ ಕೆಡಿಪಿ ಸಭೆ ಇದಾಗಿದ್ದು, ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ರಮ್ಲಾನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಸೂಚನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದರು. 

ಪಂಚಾಯತ್ ಸದಸ್ಯರುಗಳು, ಪಂಚಾಯತ್ ಪಿಡಿಒ ಡಾ ಸ್ಮøತಿ ಯು, ಕಾರ್ಯದರ್ಶಿ ಕವಿತಾ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಾಲಕೃಷ್ಣ ಮೂಲ್ಯ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ, ಅಪಾಯಕಾರಿ ಮರಗಳ, ವಿದ್ಯುತ್ ಕಂಬ, ತಂತಿಗಳ ತೆರವು, ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರಿಗೆ ಸ್ಪಂದನಾ ಮನೋಭಾವದ ಕಾರ್ಯನಿರ್ವಹಣೆ : ಪುದು ಗ್ರಾ.ಪಂ. ಕೆಡಿಪಿ ಸಭೆಯ ಪ್ರಮುಖ ಅಂಶಗಳು Rating: 5 Reviewed By: karavali Times
Scroll to Top