ನಾಗಲ್ಯಾಂಡ್ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ಎಂಎಲ್ಸಿ ಐವನ್ ಡಿಸೋಜ ನೇಮಕ - Karavali Times ನಾಗಲ್ಯಾಂಡ್ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ಎಂಎಲ್ಸಿ ಐವನ್ ಡಿಸೋಜ ನೇಮಕ - Karavali Times

728x90

16 February 2026

ನಾಗಲ್ಯಾಂಡ್ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ಎಂಎಲ್ಸಿ ಐವನ್ ಡಿಸೋಜ ನೇಮಕ

ಮಂಗಳೂರು, ಫೆಬ್ರವರಿ 16, 2026 (ಕರಾವಳಿ ಟೈಮ್ಸ್) : ಈಶಾನ್ಯ ರಾಜ್ಯದ ನಾಗಾಲ್ಯಾಂಡ್ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರನ್ನು ನೇಮಿಸಲಾಗಿದೆ. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆದೇಶದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ಈಶಾನ್ಯ ರಾಜ್ಯದ ನಾಗಾಲ್ಯಾಂಡ್ ರಾಜ್ಯಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಎಐಸಿಸಿ ಮಹತ್ವಾಕಾಂಕ್ಷಿ “ಸಂಘಟನ್ ಸೃಜನ್ ಅಭಿಯಾನ್” ಕಾರ್ಯಕ್ರಮ ಅನುಷ್ಠಾನಗೊಳಿಸಲು ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಲು ಈ ನೇಮಕಗೊಳಿಸಲಾಗಿದೆ. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಎಐಸಿಸಿ ಸದಸ್ಯರಾಗಿದ್ದು, ಈ ಹಿಂದೆ ಈಶಾನ್ಯ ರಾಜ್ಯಗಳ ಉಸ್ತುವಾರಿ ಕಾರ್ಯದರ್ಶಿಯಾಗಿ, ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಐವನ್ ಡಿಸೋಜಾ ಅವರು ಪ್ರಸ್ತುತ 2ನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ನಾಗಲ್ಯಾಂಡ್ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ಎಂಎಲ್ಸಿ ಐವನ್ ಡಿಸೋಜ ನೇಮಕ Rating: 5 Reviewed By: karavali Times
Scroll to Top