ಒಕ್ಕೆತ್ತೂರು : ಬೈಕ್-ಆಕ್ಟಿವಾ ಅಪಘಾತದಲ್ಲಿ ಮೂವರು ಆಸ್ಪತ್ರೆಗೆ - Karavali Times ಒಕ್ಕೆತ್ತೂರು : ಬೈಕ್-ಆಕ್ಟಿವಾ ಅಪಘಾತದಲ್ಲಿ ಮೂವರು ಆಸ್ಪತ್ರೆಗೆ - Karavali Times

728x90

5 February 2026

ಒಕ್ಕೆತ್ತೂರು : ಬೈಕ್-ಆಕ್ಟಿವಾ ಅಪಘಾತದಲ್ಲಿ ಮೂವರು ಆಸ್ಪತ್ರೆಗೆ

ಬಂಟ್ವಾಳ, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : ಬೈಕ್ ಹಾಗೂ ಆಕ್ಟಿವಾ ಹೋಂಡಾ ವಾಹನದ ನಡುವೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಜಂಕ್ಷನ್ನಿನಲ್ಲಿ ಫೆಬ್ರವರಿ 3 ರಂದು ಸಂಭವಿಸಿದೆ. 

ಗಾಯಗೊಂಡವರನ್ನು ಹೋಂಡಾ ಆಕ್ಟಿವಾ ಸಹಸವಾರೆ ಪುಣಚ ಗ್ರಾಮದ ಅಜ್ಜಿನಡ್ಕ ನಿವಾಸಿ ಹರಿಣಿ (19), ಸವಾರ ಚಂದ್ರಶೇಖರ ಗೌಡ ಹಾಗೂ ಬೈಕ್ ಸಹಸವಾರ ದಯಾನಂದ ಎಂದು ಹೆಸರಿಸಲಾಗಿದೆ. 

ಹರಿಣಿ ಅವರು ಚಂದ್ರಶೇಖರ ಗೌಡ ಅವರು ಸವಾರರಾಗಿದ್ದ ಆಕ್ಟಿವಾ ಹೋಂಡಾ ವಾಹನದಲ್ಲಿ ತೆರಳುತ್ತಿದ್ದ ವೇಳೆ ಲೋಕೇಶ್ ಅವರು ದಯಾನಂದ ಅವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಬಂದ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಘಟನೆಯಿಂದ ಎರಡೂ ವಾಹನಗಳ ಸಮೇತ ಸವಾರರು ರಸ್ತೆಗೆ ಬಿದ್ದಿದ್ದು, ಈ ಪೈಕಿ ಗಾಯಗೊಂಡ ಹರಿಣಿ, ಚಂದ್ರಶೇಖರ ಗೌಡ ಹಾಗೂ ದಯಾನಂದ ಅವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ ದಯಾನಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದ್ದು, ಚಂದ್ರಶೇಖರ ಗೌಡ ಅವರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ ಸಾಗಿಸಿ ಬಳಿಕ ಅಲ್ಲಿಂದ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಒಕ್ಕೆತ್ತೂರು : ಬೈಕ್-ಆಕ್ಟಿವಾ ಅಪಘಾತದಲ್ಲಿ ಮೂವರು ಆಸ್ಪತ್ರೆಗೆ Rating: 5 Reviewed By: karavali Times
Scroll to Top