ಯುಜಿಸಿಇಟಿ-26 ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಫೆಬ್ರವರಿ 27ರವರೆಗೆ ವಿಸ್ತರಣೆ - Karavali Times ಯುಜಿಸಿಇಟಿ-26 ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಫೆಬ್ರವರಿ 27ರವರೆಗೆ ವಿಸ್ತರಣೆ - Karavali Times

728x90

21 February 2026

ಯುಜಿಸಿಇಟಿ-26 ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಫೆಬ್ರವರಿ 27ರವರೆಗೆ ವಿಸ್ತರಣೆ

ಬೆಂಗಳೂರು, ಫೆಬ್ರವರಿ 22, 2026 (ಕರಾವಳಿ ಟೈಮ್ಸ್) : ಯುಜಿ ಸಿಇಟಿ-2026 ರ ಪರೀಕ್ಷೆಗೆ ನೋಂದಣಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಮತ್ತೊಂದು ಹಾಗೂ ಕೊನೆಯ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಫೆಬ್ರವರಿ 22 ಕೊನೆ ದಿನಾಂಕ ಎಂದು ಈ ಹಿಂದೆ ವಿಸ್ತರಿಸಿ ಆದೇಶ ನೀಡಲಾಗಿತ್ತು. ಇದೀಗ ಇನ್ನೂ ಕೆಲವು ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆಗೆ ಬಾಕಿ ಇದ್ದು, ದಿನಾಂಕ ವಿಸ್ತರಣೆ ಮಾಡುವಂತೆ ಕೋರಿದ ಹಿನ್ನಲೆಯಲ್ಲಿ ಫೆಬ್ರವರಿ 27 ರಂದು ರಾತ್ರಿ 11.59ರವರೆಗೆ ವಿಸ್ತರಿಸಲಾಗಿದೆ. ಹಾಗೂ ಶುಲ್ಕ ಪಾವತಿಗೆ ಮಾರ್ಚ್ 3 ರಂದು ಸಂಜೆ 5.30ರವರೆಗೆ ಅವಕಾಶ ಕಲ್ಪಿಸಿ ದಿನಾಂಕ ವಿಸ್ತರಿಸಲಾಗಿದೆ. 

ಆನ್ ಲೈನ್ ಅರ್ಜಿ ಸಲ್ಲಿಕೆಗೆ ಬಾಕಿ ಇರುವ ವಿದ್ಯಾರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಬಹುದು. ಇದು ಕೊನೆಯ ಅವಕಾಶವಾಗಿದ್ದು, ಇನ್ನು ಮುಂದಕ್ಕೆ ದಿನಾಂಕ ವಿಸ್ತರಿಸಲಾಗುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆದೇಶದಲ್ಲಿ ಸ್ಪಷ್ಟಪಡಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಯುಜಿಸಿಇಟಿ-26 ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಫೆಬ್ರವರಿ 27ರವರೆಗೆ ವಿಸ್ತರಣೆ Rating: 5 Reviewed By: karavali Times
Scroll to Top