ಬಂಟ್ವಾಳ, ಫೆಬ್ರವರಿ 10, 2026 (ಕರಾವಳಿ ಟೈಮ್ಸ್) : ಪವಿತ್ರ ಉಮ್ರಾ ಯಾತ್ರೆಗೆ ತೆರಳಿದ್ದ ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ನಿವಾಸಿ ಇಬ್ರಾಹಿಂ (65) ಅವರು ಹೃದಯಾಘಾತದಿಂದ ಫೆ 9 ರಂದು ಸೋಮವಾರ ರಾತ್ರಿ ವೇಳೆಗೆ ಮಕ್ಕಾದಲ್ಲಿ ನಿಧನರಾಗಿದ್ದಾರೆ. ಫೆ 1 ರಂದು ಪತ್ನಿ ಸಹಿತ ಕುಟುಂಬಸ್ಥರೊಂದಿಗೆ ಉಮ್ರಾ ಯಾತ್ರೆಗೆ ತೆರಳಿದ್ದ ಅವರು ತನ್ನ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ಅಲ್ಪ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
10 February 2026
- Blogger Comments
- Facebook Comments
Subscribe to:
Post Comments (Atom)













0 comments:
Post a Comment