ಮಂಗಳೂರು, ಫೆಬ್ರವರಿ 13, 2026 (ಕರಾವಳಿ ಟೈಮ್ಸ್) : ಆದಂ ಅದ್ದೇಡಿ ಹಾಗೂ ಅಝ್ಮಲ್ ನಂದಾವರ ಅವರ ನೇತೃತ್ವದ ಫ್ರೆಂಡ್ಸ್ ಗ್ರೂಪ್ ಕೈಕಂಬ-ಬಿ.ಸಿ.ರೋಡು ಇದರ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಈಸಾ ಎಂಟರ್ ಪ್ರೈಸಸ್ ಹಾಗೂ ಎಸ್ ಆರ್ ಎಂಟರ್ ಪ್ರೈಸಸ್ ಇವುಗಳ ಪ್ರಾಯೋಜಕತ್ವದಲ್ಲಿ ಮಂಗಳೂರು-ಉರ್ವ ಮೈದಾನದಲ್ಲಿ ಫೆ 11 ಹಾಗೂ 12 ರಂದು ನಡೆದ 18 ತಂಡಗಳ 6 ಓವರುಗಳ 11 ಜನರ “ಬಂಟ್ವಾಳ ಟ್ರೋಫಿ-2026” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಜೆಪ್ಪು ಫ್ರೆಂಡ್ಸ್ ಜೆಪ್ಪು ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಕಲ್ಲಡ್ಕ ಝಮಾನ್ ಬಾಯ್ಸ್ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಜೆಪ್ಪು ತಂಡದ ಸೌರವ್ ಸರಣಿ ಶ್ರೇಷ್ಠ, ನಿಶಾನ್ ಪಂದ್ಯಶ್ರೇಷ್ಠ ಹಾಗೂ ಸಂತೋಷ್ ಉತ್ತಮ ದಾಳಿಗಾರ ಪ್ರಶಸ್ತಿ ಪಡೆದುಕೊಂಡರೆ, ಝಮಾನ್ ಬಾಯ್ಸ್ ಕಲ್ಲಡ್ಕ ತಂಡದ ರಶೀದ್ ಬಾಬಾ ಉತ್ತಮ ದಾಂಡುಗಾರ ಪ್ರಶಸ್ತಿ ಪಡೆದುಕೊಂಡರು.
ಪಂದ್ಯಾಕೂಟದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಹನೀಫ್ ಓರ್ಪೆಟ್, ಹನಿ ಮಂಗಳೂರು, ಎಸ್ ಆರ್ ಸಂದೇಶ್ ಕಲ್ಲಡ್ಕ, ಮುಸ್ತಫಾ ಸ್ಪೋಟ್ರ್ಸ್ ವಲ್ರ್ಡ್, ಫಾರೂಕ್ ಎಫ್3, ಮುಹಮ್ಮದ್ ನಂದಾವರ ಮೊದಲಾದವರು ಭಾಗವಹಿಸಿದ್ದರು.













0 comments:
Post a Comment