ಬಂಟ್ವಾಳ, ಫೆಬ್ರವರಿ 14, 2026 (ಕರಾವಳಿ ಟೈಮ್ಸ್) : 13 ವರ್ಷಗಳ ಹಿಂದಿನ ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೂಂಜಾಲಕಟ್ಟೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ನಿವಾಸಿ ಆಲ್ವಿನ್ ರೋಡ್ರಿಗಸ್ (53) ಎಂದು ಹೆಸರಿಸಲಾಗಿದೆ. 2013 ರ ನವೆಂಬರ್ 13 ರಂದು ಚಿತ್ರಶೇಖರ ಮಡಂತ್ಯಾರ್ ಎಂಬರಿಗೆ, ಆರೋಪಿ ಆಲ್ವಿನ್ ರೊಡ್ರಿಗಸ್ ಹಲ್ಲೆ ಮಾಡಿದ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ನ್ಯಾಯಲಯಕ್ಕೆ ಹಾಜರಾಗದೆ ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಬೆಂಗಳೂರು ನಗರ ವ್ಯಾಪ್ತಿಯ ಸಂಪಿಗೆ ರಾಮನಗರ ಎಂಬಲ್ಲಿ ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.












0 comments:
Post a Comment