ಬಂಟ್ವಾಳ, ಮಾರ್ಚ್ 08, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಹಳೆ ತಾಲೂಕು ಆಫೀಸ್ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಂಬೆ ನಿವಾಸಿ ದಿನೇಶ್ (55) ಅವರು ಮಾ 5 ರಂದು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಅವರ ಕೆಎ19 ಇಜಿ7463 ನೋಂದಣಿ ಸಂಖ್ಯೆಯ ಆಕ್ಟ್ಯಿವಾ ಹೋಂಡಾದಲ್ಲಿ ಬಿ ಸಿ ರೋಡಿಗೆ ಬಂದು ಆಕ್ಟಿವಾ ಹೋಂಡಾವನ್ನು ಬಿ ಸಿ ರೋಡಿನ ಬಂಟ್ವಾಳ ಹಳೆಯ ತಾಲೂಕು ಆಫೀಸ್ ಬಳಿ ಖಾಲಿ ಜಾಗದಲ್ಲಿ ನಿಲ್ಲಿಸಿ ಲಾಕ್ ಮಾಡಿ ಬಸ್ಸಿನಲ್ಲಿ ಮದ್ದಡ್ಕದ ಕಿನ್ನಿಗೋಳಿಗೆ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಸಂಜೆ ಸುಮಾರು 5.30 ಗಂಟೆಗೆ ಬಂದು ನೋಡಿದಾಗ ಆಕ್ಟಿವಾ ಹೋಂಡಾ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಕಾಣೆಯಾಗಿರುತ್ತದೆ. ಸುತ್ತ ಮುತ್ತ ಹುಡುಕಾಡಿ, ಪರಿಚಯದವರಲ್ಲಿ ವಿಚಾರಿಸಿದರೂ ಇದುವರೆಗೂ ಆಕ್ಟಿವಾ ಹೋಂಡಾ ಪತ್ತೆಯಾಗದೆ ಕಳವಾಗಿರುತ್ತದೆ. ಈ ಬಗ್ಗೆ ದಿನೇಶ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment