ಫರಂಗಿಪೇಟೆ ನದಿ ದಡದಲ್ಲಿ ಆಧಾರ್ ಕಾಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಫರಂಗಿಪೇಟೆ ನದಿ ದಡದಲ್ಲಿ ಆಧಾರ್ ಕಾಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

7 March 2026

ಫರಂಗಿಪೇಟೆ ನದಿ ದಡದಲ್ಲಿ ಆಧಾರ್ ಕಾಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಮಾರ್ಚ್ 08, 2026 (ಕರಾವಳಿ ಟೈಮ್ಸ್) : ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿ ದಡದಲ್ಲಿ ಆಧಾರ್ ಕಾರ್ಡ್ ರಾಶಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಅಂಚೆ ಇಲಾಖೆಯ ಬೇಜವಾಬ್ದಾರಿ ಕಂಡು ಬಂದಿರುವ ಹಿನ್ನಲೆಯಲ್ಲಿ ಅಂಚೆ ಇಲಾಖೆ ವಿರುದ್ದ ಬಂಟ್ವಾಳ ತಹಶೀಲ್ದಾರ್ ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪುದು ಗ್ರಾಮದ ಸುಜೀರ್ ಎಂಬಲ್ಲಿಯ ನೇತ್ರಾವತಿ ನದಿ ದಡದಲ್ಲಿ ಮಾ 3 ರಂದು ಸಂಜೆ 5 ಗಂಟೆಯ ವೇಳೆಗೆ ಸ್ಥಳೀಯ ನಿವಾಸಿಗಳ 2013 ರಿಂದ 2023 ರವರೇಗಿನ ಅಂದಾಜು 400 ರಿಂದ 500 ಮೂಲ ಆಧಾರ್ ಕಾರ್ಡ್ ಗಳು ಪತ್ತೆಯಾಗಿರುತ್ತದೆ. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆಯ ಪೆÇೀಸ್ಟ್ ಆಫೀಸಿನ ಸೀಲ್ ಪತ್ತೆಯಾಗಿರುತ್ತದೆ. ಮೂಲ ಆಧಾರ್ ಕಾರ್ಡ್ ಪ್ರತಿಗಳು ಸಾರ್ವಜನಿಕರ ಮನೆಗೆ ತಲುಪಿಸಿರುವುದಿಲ್ಲ. ನೇತ್ರಾವತಿ ನದಿ ತೀರದಲ್ಲಿ ಸಿಕ್ಕಿದಂತಹ ಮೂಲ ಆಧಾರ್ ಪ್ರತಿಗಳು ಪ್ರಸ್ತುತ ಗ್ರಾಮ ಪಂಚಾಯತ್ ಅವರ ಸ್ವಾಧೀನದಲ್ಲಿರುತ್ತದೆ. ಸಂಬಂಧಪಟ್ಟ ಅಂಚೆ ಇಲಾಖೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೆÇಲೀಸ್ ಇಲಾಖೆಗೆ ಪತ್ರ ಬರೆಯುವಂತೆ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕರು ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿರುತ್ತಾರೆ. ಆಧಾರ್ ಕಾರ್ಡ್ ಗಳಲ್ಲಿ ಫರಂಗಿಪೇಟೆಯ ಪೆÇೀಸ್ಟ್ ಆಫೀಸಿನ ಸೀಲ್ ಪತ್ತೆಯಾಗಿರುವುದರಿಂದ ಮತ್ತು ಆಧಾರ್ ಕಾರ್ಡನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಅಂಚೆ ಇಲಾಖೆಯವರದ್ದಾಗಿರುತ್ತದೆ.  ಆದುದರಿಂದ  ಅಂಚೆ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕ ಸೇವಕರಾಗಿದ್ದು, ಈ ದಾಖಲೆಗಳನ್ನು ಸುರಕ್ಷಿತವಾಗಿ ಸಾರ್ವಜನಿಕರಿಗೆ ವಿತರಿಸುವ ಕಾನೂನುತ್ಮಾಕ ಜವಾಬ್ದಾರಿಯನ್ನು ಹೊಂದಿದ್ದರೂ ಈ ದಾಖಲೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬೇಜಾವ್ದಾರಿಯಿಂದ  ಬಿಸಾಡಿರುವುದು ಮೇಲ್ನೋಟಕ್ಕೆ ನಂಬಿಕೆ ದ್ರೋಹ ಎಸೆಗಿರುವುದು ಕಂಡು ಬಂದಿದೆ ಎಂದು ತಹಶೀಲ್ದಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2026 ಕಲಂ 198 ಬಿ ಎನ್ ಎಸ್ ಹಾಗೂ 37 ಆಧಾರ್ ಕಾಯ್ದೆ-2016 ರಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ ನದಿ ದಡದಲ್ಲಿ ಆಧಾರ್ ಕಾಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top