ಬಜೆಟ್ ಅಧಿವೇಶನದ ಬಗ್ಗೆ ತಿಳಿದುಕೊಳ್ಳಲು ಮಾ 9 ರಂದು ಶಾಸಕರಿಗೆ ಕಾರ್ಯಾಗಾರ : ಸ್ಪೀಕರ್ ಯು.ಟಿ. ಖಾದರ್ - Karavali Times ಬಜೆಟ್ ಅಧಿವೇಶನದ ಬಗ್ಗೆ ತಿಳಿದುಕೊಳ್ಳಲು ಮಾ 9 ರಂದು ಶಾಸಕರಿಗೆ ಕಾರ್ಯಾಗಾರ : ಸ್ಪೀಕರ್ ಯು.ಟಿ. ಖಾದರ್ - Karavali Times

728x90

7 March 2026

ಬಜೆಟ್ ಅಧಿವೇಶನದ ಬಗ್ಗೆ ತಿಳಿದುಕೊಳ್ಳಲು ಮಾ 9 ರಂದು ಶಾಸಕರಿಗೆ ಕಾರ್ಯಾಗಾರ : ಸ್ಪೀಕರ್ ಯು.ಟಿ. ಖಾದರ್

ಮಂಗಳೂರು, ಮಾರ್ಚ್ 08, 2026 (ಕರಾವಳಿ ಟೈಮ್ಸ್) : ಬಜೆಟ್ ಅಧಿವೇಶನದ ಪ್ರಾಮುಖ್ಯತೆ ತಿಳಿದುಕೊಳ್ಳಲು, ಅನುದಾನದ ವರ್ಗೀಕರಣ ಮತ್ತು ಹಂಚಿಕೆ, ರಾಜಸ್ವ ಸಂಗ್ರಹ, ಆರ್ಥಿಕ ವ್ಯವಸ್ಥೆಗಳ ವಿಚಾರ ತಿಳಿದುಕೊಳ್ಳಲು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರಿಗೆ ಅನುಕೂಲವಾಗುವಂತೆ ಶಾಸಕರಿಗೆ ಕಾರ್ಯಾಗಾರವನ್ನು ಮಾರ್ಚ್ 9 ರಂದು ಸೋಮವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಲಲಿತ್ ಅಶೋಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸ್ಪೀಕರ್ ಡಾ ಯು ಟಿ ಖಾದರ್ ಫರೀದ್ ಹೇಳಿದರು. 

ಭಾನುವಾರ ಬೆಳಿಗ್ಗೆ ನಗರದ ಸಕ್ರ್ಯೂಟ್ ಹೌಸಿನಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕಾರ್ಯಾಗಾರದಲ್ಲಿ ಮುಖ್ಯಮಂತ್ರಿಗಳು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಡುವರು. 17ನೇ ಬಜೆಟ್ ಮಂಡಿಸಿ ಸದನದ ವಿಶೇಷ ಅನುಭವ ಹೊಂದಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳನ್ನೇ ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಮಡಲಾಗಿದೆ. ಹಿರಿಯ ಅನುಭವಿ ಅಧಿಕಾರಿಗಳು ಉಪಸ್ಥಿತರಿರುವರು ಎಂದರು.

ಕಾರ್ಯಾಗಾರದಲ್ಲಿ ಮೊನ್ನೆ ಮಂಡಿಸಲಾದ ಬಜೆಟ್ ಬಗ್ಗೆ ಯಾವುದೇ ಚರ್ಚೆ ಇರುವುದಿಲ್ಲ. ಶಾಸಕರಿಗೆ ಅನುದಾನ ಬಳಕೆ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪೂರಕವಾಗುವ ನಿಟ್ಟಿನಲ್ಲಿ ಈ ಕಾರ್ಯಾಗಾರ ನಡೆಯಲಿದ್ದು, ಇಂತಹ ಕಾರ್ಯಾಗಾರ ಇದೇ ಮೊದಲ ಬಾರಿಗೆ ನಡೆಯಲಿದೆ ಎಂದ ಖಾದರ್, ಶಾಸಕರು ಕಡ್ಡಾಯವಾಗಿ ಶಾಸನ ಸಭೆಗಳಿಗೆ ಹಾಜರಾಗನೇಕು ಎಂದು ಕಿವಿ ಮಾತು ಹೇ¼ಳಿದರು. 

ಶುಕ್ರವಾರ ಸಿಎಂ ಮಂಡಿಸಿದ ಈ ಬಾರಿಯ ಬಜೆಟಿನಲ್ಲಿ ಉಳ್ಳಾಲ ಕ್ಷೇತ್ರದ ಸಜಿಪನಡುವಿನಲ್ಲಿ ಪೊಲೀಸ್  ಠಾಣೆ ಘೋಷಿಸಲಾಗಿದೆ ಎಂದ ಸ್ಪೀಕರ್, ಎಸ್ ಐ ಆರ್ ಬಗ್ಗೆ ಪ್ರತಿಕ್ರಯಿಸಿ ಪ್ರತಿಯೊಬ್ಬರಿಗೂ ಮತದಾನ ಹಕ್ಕು ಸಿಗಲೇಬೇಕು. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಬಜೆಟ್ ಅಧಿವೇಶನದ ಬಗ್ಗೆ ತಿಳಿದುಕೊಳ್ಳಲು ಮಾ 9 ರಂದು ಶಾಸಕರಿಗೆ ಕಾರ್ಯಾಗಾರ : ಸ್ಪೀಕರ್ ಯು.ಟಿ. ಖಾದರ್ Rating: 5 Reviewed By: karavali Times
Scroll to Top