ಕಂಬಳ ಕ್ರೀಡೆಯ ಅಡೆ ತಡೆ ನಿವಾರಿಸಿ ಅದನ್ನು ಮತ್ತೆ ಮುಂದುವರಿಸುವಲ್ಲಿ ಸಿದ್ದರಾಮಯ್ಯ ಸ್ಪಂದನೆ ಉಲ್ಲೇಖನೀಯ : ಸ್ಪೀಕರ್ ಡಾ. ಯು.ಟಿ. ಖಾದರ್ - Karavali Times ಕಂಬಳ ಕ್ರೀಡೆಯ ಅಡೆ ತಡೆ ನಿವಾರಿಸಿ ಅದನ್ನು ಮತ್ತೆ ಮುಂದುವರಿಸುವಲ್ಲಿ ಸಿದ್ದರಾಮಯ್ಯ ಸ್ಪಂದನೆ ಉಲ್ಲೇಖನೀಯ : ಸ್ಪೀಕರ್ ಡಾ. ಯು.ಟಿ. ಖಾದರ್ - Karavali Times

728x90

7 March 2026

ಕಂಬಳ ಕ್ರೀಡೆಯ ಅಡೆ ತಡೆ ನಿವಾರಿಸಿ ಅದನ್ನು ಮತ್ತೆ ಮುಂದುವರಿಸುವಲ್ಲಿ ಸಿದ್ದರಾಮಯ್ಯ ಸ್ಪಂದನೆ ಉಲ್ಲೇಖನೀಯ : ಸ್ಪೀಕರ್ ಡಾ. ಯು.ಟಿ. ಖಾದರ್

 ಬಂಟ್ವಾಳ, ಮಾರ್ಚ್ 08, 2026 (ಕರಾವಳಿ ಟೈಮ್ಸ್) : ಕಂಬಳ ಕೇವಲ ಮನೋರಂಜನೆಗಾಗಿ ಇರುವ ಕ್ರೀಡೆಯಾಗಿಲ್ಲ ಉಳಿದಿಲ್ಲ. ತುಳುನಾಡಿನ ಮಣ್ಣಿನ ಶ್ರೀಮಂತ ಕಲೆ, ಸಂಸ್ಕøತಿ ಹಾಗೂ ಕ್ರೀಡೆಯನ್ನು ಮುಂದಿನ ಯುವ ತಳಿಮಾರಿಗೆ ತಲುಪಿಸುವ ಮಹತ್ತರ ಜವಾಬ್ದಾರಿಯೊಂದಿಗೆ ಆಯೋಜಿಸಲಾಗುತ್ತಿದೆ ಎಂದು ರಾಜ್ಯ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಹೇಳಿದರು. 

ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಆರಂಗೊಂಡ 15ನೇ ಹೊನಲು ಬೆಳಕಿನ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಂಬಳ ಕ್ರೀಡೆಗೆ ಕೆಲವೊಂದು ಅಡೆಗಡೆಗಳು ಬಂದರೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ನ್ಯಾಯಾಲಯದ ಮೂಲಕ ಈ ಕ್ರೀಡೆಯನ್ನು ಉಳಿಸಿ ಮುಂದುವರೆಸಲು ಎಲ್ಲ ಸಕಲ ಕ್ರಮಗಳನ್ನು ಕೈಗೊಂಡಿದೆಯಲ್ಲದೆ ಕಂಬಳ ಕ್ರೀಡೆಗೆ ಸೂಕ್ತ ಅನುದಾನದ ಜೊತೆಗೆ ಕ್ರೀಡಾ ಮಾನ್ಯತೆಯನ್ನೂ ನೀಡಿದೆ ಎಂದು ಶ್ಲಾಘಿಸಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶುಭ ಹಾರೈಸಿದರು. 

ಸೋಲೂರು ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಅಲ್ಲಿಪಾದೆ ಚರ್ಚ್ ಗುರು ರಾಬರ್ಟ್ ಡಿಸೋಜ, ಆಳದಂಗಡಿ ಅರಮನೆಯ ಡಾ ಪದ್ಮಪ್ರಸಾದ ಅಜಿಲ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕಂಬಳ ಕ್ರೀಡೆಯ ಅಡೆ ತಡೆ ನಿವಾರಿಸಿ ಅದನ್ನು ಮತ್ತೆ ಮುಂದುವರಿಸುವಲ್ಲಿ ಸಿದ್ದರಾಮಯ್ಯ ಸ್ಪಂದನೆ ಉಲ್ಲೇಖನೀಯ : ಸ್ಪೀಕರ್ ಡಾ. ಯು.ಟಿ. ಖಾದರ್ Rating: 5 Reviewed By: karavali Times
Scroll to Top