ಗುಡ್ಡೆಅಂಗಡಿ ಗ್ಯಾಸ್ ಪಂಪಿನಲ್ಲಿ ಅಟೋ ಚಾಲಕನ ಪುಂಡಾಟ : ಆರೋಪಿ ಪೊಲೀಸ್ ವಶಕ್ಕೆ - Karavali Times ಗುಡ್ಡೆಅಂಗಡಿ ಗ್ಯಾಸ್ ಪಂಪಿನಲ್ಲಿ ಅಟೋ ಚಾಲಕನ ಪುಂಡಾಟ : ಆರೋಪಿ ಪೊಲೀಸ್ ವಶಕ್ಕೆ - Karavali Times

728x90

21 March 2026

ಗುಡ್ಡೆಅಂಗಡಿ ಗ್ಯಾಸ್ ಪಂಪಿನಲ್ಲಿ ಅಟೋ ಚಾಲಕನ ಪುಂಡಾಟ : ಆರೋಪಿ ಪೊಲೀಸ್ ವಶಕ್ಕೆ

ಬಂಟ್ವಾಳ, ಮಾರ್ಚ್ 21, ಮಾರ್ಚ್, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ಅಟೋ ಗ್ಯಾಸ್ ಪಂಪಿಗೆ ಬಂದ ಅಟೋ ರಿಕ್ಷಾ ಚಾಲಕನೋರ್ವ ಪಂಪಿನ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಈ ಬಗ್ಗೆ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಸಜಿಪಮೂಡ ಗ್ರಾಮದ ಅಫ್ರೀಝ್ (28) ಎಂದು ಗುರುತಿಸಲಾಗಿದೆ. ಈ ಬಗ್ಗೆ ಪಂಪಿನ ಮ್ಯಾನೇಜರ್ ಕುನಲ್ ಭುಹ್ನಿಯಾ (27) ಅವರು ಪೊಲೀಸರಿಗೆ ದೂರು ನೀಡಿದ್ದು, ಬೊಗೋಡಿ ಎಂಬಲ್ಲಿರುವ  ಗ್ಯಾಸ್ ಪಂಪಿನಲ್ಲಿ ಮಾರ್ಚ್ 20 ರಂದು ಸಂಜೆ ಕೆಎ 19 ಎಸಿ 2102 ನೊಂದಣಿ ಸಂಖ್ಯೆಯ ಅಟೋ ರಿಕ್ಷಾವನ್ನು ಚಲಾಯಿಸಿಕೊಂಡು ಬಂದ ಆರೋಪಿ ಅಟೋ ಚಾಲಕ ಅಫ್ರೀಝ್ ಗ್ಯಾಸ್ ಪಂಪ್ ಏಜೆನ್ಸಿಯ ಒಳಗೆ ಪ್ರವೇಶಿಸಿ ಕಚೇರಿ ಸಿಬ್ಬಂದಿ ಅಶ್ವಿನ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುತ್ತಾನೆ. 

ನಂತರ ಹೊರಬಂದು ಗ್ಯಾಸ್ ಪಂಪ್ ಏಜೆನ್ಸಿಯ ಸೊತ್ತುಗಳಿಗೆ ಹಾನಿ ಮಾಡಿದ್ದು, ಸುಮಾರು 48 ಸಾವಿರ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿ ಗ್ಯಾಸ್ ಪಂಪಿನ ಅಂಗಳದಲ್ಲಿ ರೌಡಿ ರೀತಿಯಲ್ಲಿ ವರ್ತಿಸುತ್ತಿದ್ದು, ಈ ಸಂದರ್ಭ ಸ್ಥಳಕ್ಕೆ ಬಂದ ಬೀಟ್ ಪೊಲೀಸ್ ಸಿಬ್ಬಂದಿ ಪ್ರವೀಣ್ ಅವರು ಆರೋಪಿಯನ್ನು ಎತ್ತಿಕೊಂಡು ಬಂಧಿಸುವ ದೃಶ್ಯ ಸೆರೆಯಾಗಿದೆ. ಆರೋಪಿ ಮಾದಕ ವಸ್ತು ಸೇವನೆ ಮಾಡಿದ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬರುತ್ತಿದ್ದು, ಈ ಬಗ್ಗೆ ಪೊಲೀಸ್ ತನಿಖೆಯಿಂದ ಇನ್ನಷ್ಟು ವಿವರ ದೊರೆಯಬೇಕಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಗುಡ್ಡೆಅಂಗಡಿ ಗ್ಯಾಸ್ ಪಂಪಿನಲ್ಲಿ ಅಟೋ ಚಾಲಕನ ಪುಂಡಾಟ : ಆರೋಪಿ ಪೊಲೀಸ್ ವಶಕ್ಕೆ Rating: 5 Reviewed By: karavali Times
Scroll to Top