ಬಂಟ್ವಾಳ, ಮಾರ್ಚ್ 21, ಮಾರ್ಚ್, 2026 (ಕರಾವಳಿ ಟೈಮ್ಸ್) : ಕೈಕಾಲು ಮುಖ ತೊಳೆಯಲು ನೇತ್ರಾವತಿ ನದಿ ತೀರಕ್ಕೆ ಹೋದ ವ್ಯಕ್ತಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಪುದು ಗ್ರಾಮದಲ್ಲಿ ಮಾ 20 ರಂದು ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ಪುದು ಗ್ರಾಮದ ನಿವಾಸಿ ಉಮೇಶ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪುತ್ರಿ ಕೃತಿಕ (21) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ತಂದೆ ಉಮೇಶ್ ಅವರು ಮಾ 20 ರಂದು ಬೆಳಿಗ್ಗೆ 8.30 ಗಂಟೆಗೆ ಕೈ ಕಾಲು ಮುಖ ತೊಳೆಯಲೆಂದು ನೇತ್ರಾವತಿ ನದಿ ತೀರಕ್ಕೆ ಹೋಗಿದ್ದವರು ಸಮಯ 8.45ರವರೆಗೂ ವಾಪಾಸು ಮನೆಗೆ ಬಾರದೇ ಇದ್ದುದರಿಂದ ನದಿ ತೀರಕ್ಕೆ ತೆರಳಿ ನೋಡಿದಾಗ ತಂದೆಯು ನದಿ ನೀರಿಗೆ ಬಿದ್ದಿದ್ದು ಅವರ ತಲೆಯು ನೀರನಲ್ಲಿದ್ದು ಕಾಲುಗಳು ನದಿ ದಂಡೆಯ ಮೇಲಿದ್ದವು. ತಕ್ಷಣ ಅವರನ್ನು ತಾಯಿ ಹಾಗೂ ನೆರೆಕರೆಯವರ ಸಹಾಯದಿಂದ ರಿಕ್ಷಾದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದಾಗ ಅದಾಗಲೇ ಅವರು ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

























0 comments:
Post a Comment