ತಲಪಾಡಿ ಅಟೋ ಗ್ಯಾಸ್ ಪಂಪಿನಲ್ಲಿ ಏಕಾಏಕಿ ದರ ಏರಿಕೆ : ರಿಕ್ಷಾ ಚಾಲಕರ ಹಠಾತ್ ಪ್ರತಿಭಟನೆ - Karavali Times ತಲಪಾಡಿ ಅಟೋ ಗ್ಯಾಸ್ ಪಂಪಿನಲ್ಲಿ ಏಕಾಏಕಿ ದರ ಏರಿಕೆ : ರಿಕ್ಷಾ ಚಾಲಕರ ಹಠಾತ್ ಪ್ರತಿಭಟನೆ - Karavali Times

728x90

10 March 2026

ತಲಪಾಡಿ ಅಟೋ ಗ್ಯಾಸ್ ಪಂಪಿನಲ್ಲಿ ಏಕಾಏಕಿ ದರ ಏರಿಕೆ : ರಿಕ್ಷಾ ಚಾಲಕರ ಹಠಾತ್ ಪ್ರತಿಭಟನೆ

ಬಂಟ್ವಾಳ, ಮಾರ್ಚ್ 10, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ತಲಪಾಡಿ ಅಟೋ ಗ್ಯಾಸ್ ಪಂಪಿನಲ್ಲಿ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ 10 ರೂಪಾಯಿ ದರ ಹೆಚ್ಚಳ ಮಾಡಿದ ಬಗ್ಗೆ ಅಟೋ ರಿಕ್ಷಾ ಚಾಲಕರು ಮಂಗಳವಾರ ಹಠಾತ್ ಪ್ರತಿಭಟನೆ ನಡೆಸಿದ್ದಾರೆ. 

ಕೈಕಂಬ ಸಮೀಪದ ತಲಪಾಡಿ ಮಹಾಲಕ್ಷ್ಮಿ ಅಟೋ ಗ್ಯಾಸ್ ಪಂಪಿನಲ್ಲಿ ಕೆಜಿ ದರಕ್ಕಿಂತ 10 ರೂಪಾಯಿ ಹೆಚ್ಚುವರಿಯಾಗಿ ಪಡೆದುಕೊಳ್ಳಲಾಗುತ್ತಿದೆ ಎಂದು ಆರೋಪದ ಹಿನ್ನೆಲೆಯಲ್ಲಿ ಅಟೋ ರಿಕ್ಷಾ ಚಾಲಕರ-ಮಾಲಕರ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಅವರ ನೇತೃತ್ವದಲ್ಲಿ ರಿಕ್ಷಾ ಚಾಲಕರು ಪಂಪ್ ಮುಂದೆ ಪ್ರತಿಭಟನೆ ನಡೆಸಿದ್ದು, ಕೆಲ ಹೊತ್ತು ರಿಕ್ಷಾ ಚಾಲಕರು ಹಾಗೂ ಪಂಪ್ ಸಿಬ್ಬಂದಿಗಳ ನಡುವೆ ಮಾತಿನ ವಿನಿಮಯ ನಡೆಯಿತು

ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಮಾತುಕತೆ ನಡೆಸಿದ್ದು, ಪಂಪ್ ಪ್ರಮುಖರು ಹಳೆಯ ದರವನ್ನು ಅಂದರೆ 67.45 ರೂಪಾಯಿಯನ್ನೇ ವಿಧಿಸುವುದಾಗಿ ಒಪ್ಪಿದ ಹಿನ್ನೆಲೆಯಲ್ಲಿ ಅಟೋ ಚಾಲಕರು  ಪ್ರತಿಭಟನೆ ಹಿಂಪಡೆದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತಲಪಾಡಿ ಅಟೋ ಗ್ಯಾಸ್ ಪಂಪಿನಲ್ಲಿ ಏಕಾಏಕಿ ದರ ಏರಿಕೆ : ರಿಕ್ಷಾ ಚಾಲಕರ ಹಠಾತ್ ಪ್ರತಿಭಟನೆ Rating: 5 Reviewed By: karavali Times
Scroll to Top