ಬಂಟ್ವಾಳ, ಮಾರ್ಚ್ 02, ಮಾರ್ಚ್, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆ ಶಿಥಿಲಗೊಂಡ ಹಿನ್ನಲೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಕಳೆದ ಕೆಲ ತಿಂಗಳ ಹಿಂದೆ ಅಳವಡಿಸಲಾಗಿದ್ದ ಕಬ್ಬಿಣದ ಕಮಾನು ಮತ್ತೆ ವಾಹನ ಡಿಕ್ಕಿ ಹೊಡೆದು ಉರುಳಿ ಬಿದ್ದ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.
ಇಲ್ಲಿನ ಸೇತುವೆ ಶಿಥಿಲಗೊಂಡ ಹಿನ್ನಲೆಯಲ್ಲಿ ಸೇತುವೆಯಲ್ಲಿ ಘನ ವಾಹನ ನಿಷೇಧಿಸಿ ತಹಶೀಲ್ದಾರರು ಆದೇಶ ಹೊರಡಿಸಿದ ಪ್ರಕಾರ ಸ್ಥಳೀಯ ಪುರಸಭಾ ವತಿಯಿಂದ ಸೇತುವೆಗೆ ಕಬ್ಬಿಣದ ಕಮಾನು ಅಳವಡಿಸಲಾಗಿತ್ತು. ಆದರೆ ಇದು ಅಳವಡಿಸಿರುವುದು ಅವೈಜ್ಞಾನಿಕವಾಗಿದ್ದು, ಹಾಗೂ ಕಮಾನು ಅಳವಡಿಸಿದ ಬಗ್ಗೆ ವಾಹನ ಸವಾರರ ಗಮನಕ್ಕೆ ಬರುವಂತೆ ಯಾವುದೇ ಮುನ್ಸೂಚನಾ ಫಲಕ ಅಳವಡಿಸದ ಪರಿಣಾಮ ಹಲವು ಬಾರಿ ವಾಹನಗಳು ಡಿಕ್ಕಿ ಹೊಡೆದು ಇಲ್ಲಿನ ಕಮಾನು ಧರಾಶಾಹಿಯಾಗಿತ್ತು. ಕೆಲವು ಬಾರಿ ವಾಹನಗಳಿಗೆ ಡ್ಯಾಮೇಜ್ ಸಂಭವಿಸಿದೆಯಾದರೂ ಗಂಭೀರ ಅಪಾಯಗಳು ಸ್ವಲ್ಪದರಲ್ಲೇ ತಪ್ಪಿ ಹೋಗಿದೆ.
ಬಳಿಕ ಮತ್ತೆ ಈ ಕಮಾನನ್ನು ಭದ್ರವಾಗಿ ಅಳವಡಿಸಲಾಗಿತ್ತಾದರೂ ಎಲ್ಲಿಯೂ ಕಮಾನು ಅಳವಡಿಸಿದ ಬಗ್ಗೆ ಮುನ್ಸೂಚನೆ ಇಲ್ಲದ ಪರಿಣಾಮ ಇದೀಗ ಮತ್ತೆ ಅದೇ ಅವಾಂತರ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
















0 comments:
Post a Comment