ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ವತಿಯಿಂದ ಹೊನಲು ಬೆಳಕಿನ ಕ್ರೀಡಾಕೂಟ - Karavali Times ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ವತಿಯಿಂದ ಹೊನಲು ಬೆಳಕಿನ ಕ್ರೀಡಾಕೂಟ - Karavali Times

728x90

1 March 2026

ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ವತಿಯಿಂದ ಹೊನಲು ಬೆಳಕಿನ ಕ್ರೀಡಾಕೂಟ

ಬಂಟ್ವಾಳ, ಮಾರ್ಚ್ 01, 2026 (ಕರಾವಳಿ ಟೈಮ್ಸ್) : ನೇರಳಕಟ್ಟೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ವೈ.ಸಿ.ಜಿ-2026 ಹೊನಲು ಬೆಳಕಿನ ಕ್ರೀಡಾಕೂಟವು ಶನಿವಾರ ನೇರಳಕಟ್ಟೆಯಲ್ಲಿ ನಡೆಯಿತು.

ಪತ್ರಕರ್ತ ಲತೀಫ್ ನೇರಳಕಟ್ಟೆ ಕ್ರೀಡಾಕೂಟ ಉದ್ಘಾಟಿಸಿದರು. ವೈಸಿಜಿ ಅದ್ಯಕ್ಷ ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಅರುಣ್ ಕುಮಾರ್ ಪುತ್ತಿಲ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಸದಸ್ಯ ಶ್ರೀಧರ್ ರೈ, ಯುವ ಮುಖಂಡ ನಿರಂಜನ್ ರೈ ಶುಭ ಹಾರೈಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೇರಳಕಟ್ಟೆ ಡಿ ಕೆ ಶ್ರದ್ದಾ ಕೇಂದ್ರದ ಡಿ ಕೆ ಸ್ವಾಮೀಜಿ ವಿಜೇತರಿಗೆ ಬಹುಮಾನ ವಿತರಿಸಿದರು. ಯುವ ಮುಖಂಡ ಫಾರೂಕ್ ಬಯಬೆ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶೋಕ್ ರೈ, ಧನಂಜಯ ಗೌಡ, ಪ್ರೇಮಾ ಜಯಕರ ದೇವಾಡಿಗ, ನೇರಳಕಟ್ಟೆ ಸಿ ಎ ಬೇಂಕ್ ಉಪಾಧ್ಯಕ್ಷ ಡಿ ತನಿಯಪ್ಪ ಗೌಡ, ನಾಟಿ ವೈದ್ಯ ಗಂಗಾಧರ ಪಂಡಿತ್, ಪ್ರಮುಖರಾದ ವೆಂಕಪ್ಪ ರೈ ಕುರ್ಲೆತ್ತಿಮಾರು, ರಾಮಚಂದ್ರ ಮಾಸ್ಟರ್, ಭೋಜ ನಾರಾಯಣ, ಬೇಬಿ ನಾಯ್ಕ, ರಾಜೇಶ್ ಕರುವನ್, ರೋಹಿತಾಶ್ವ, ಕುಸುಮಾಕರ ಗೌಡ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಯಂಗ್ ಚಾಲೆಂಜರ್ಸ್ ಗೌರವಾಧ್ಯಕ್ಷ ವಿಶುಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ವಂದಿಸಿದರು. ಗೋಪಾಲಕೃಷ್ಣ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. 

ಪೆರಾಜೆ, ಮಾಣಿ, ವೈಸಿಜಿ ನೇರಳಕಟ್ಟೆ ತಂಡಗಳಿಗೆ ಪ್ರಥಮ ಪ್ರಶಸ್ತಿ

ಆಹ್ವಾನಿತ ತಂಡಗಳ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಶ್ರೀ ವಿಷ್ಣು ಪೆರಾಜೆ ಪ್ರಥಮ, ಪಂಡಿತ್ ಗಯ್ಸ್  ದ್ವಿತೀಯ, ವೈಸಿಜಿ ನೇರಳಕಟ್ಟೆ ತೃತೀಯ, ಯುವಶಕ್ತಿ ಗಣೇಶನಗರ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

ಅಂಡರ್ 21 ವಾಲಿಬಾಲ್ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ಪ್ರಥಮ, ತತ್ವಮಸಿ ದ್ವಿತೀಯ, ವೈಸಿಜಿ ನೇರಳಕಟ್ಟೆ ತೃತಿಯ ಹಾಗೂ ಜನನಿ ಕ್ಯಾಟರಿಂಗ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

ಬೆಲ್ಟ್ ಏರ್ಯ ವಾಲಿಬಾಲ್ ಪಂದ್ಯಾಟದಲ್ಲಿ ವೈಸಿಜಿ ನೇರಳಕಟ್ಟೆ ಪ್ರಥಮ, ತತ್ವಮಸಿ ದ್ವಿತೀಯ, ನೇತಾಜಿ ತೃತಿಯ ಹಾಗೂ ಯುವಶಕ್ತಿ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ವತಿಯಿಂದ ಹೊನಲು ಬೆಳಕಿನ ಕ್ರೀಡಾಕೂಟ Rating: 5 Reviewed By: karavali Times
Scroll to Top