ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆ ಮುಂದುವರಿಸುವ ಬಗ್ಗೆ ಸರಕಾರ ಯಾವುದೇ ಆದೇಶ ಹೊರಡಿಸಿಲ್ಲ : ಆರ್ಥಿಕ ಇಲಾಖೆ ಸ್ಪಷ್ಟನೆ - Karavali Times ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆ ಮುಂದುವರಿಸುವ ಬಗ್ಗೆ ಸರಕಾರ ಯಾವುದೇ ಆದೇಶ ಹೊರಡಿಸಿಲ್ಲ : ಆರ್ಥಿಕ ಇಲಾಖೆ ಸ್ಪಷ್ಟನೆ - Karavali Times

728x90

31 March 2026

ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆ ಮುಂದುವರಿಸುವ ಬಗ್ಗೆ ಸರಕಾರ ಯಾವುದೇ ಆದೇಶ ಹೊರಡಿಸಿಲ್ಲ : ಆರ್ಥಿಕ ಇಲಾಖೆ ಸ್ಪಷ್ಟನೆ

 ಬೆಂಗಳೂರು, ಮಾರ್ಚ್ 31, 2026 (ಕರಾವಳಿ ಟೈಮ್ಸ್) : ಸರ್ಕಾರದಲ್ಲಿ ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆಯನ್ನು ಮುಂದುವರೆಸುವ ಬಗ್ಗೆ ಆರ್ಥಿಕ ಇಲಾಖೆಯ ಅಧಿಕೃತ ಜ್ಞಾಪನದ ಮಾದರಿಯಲ್ಲಿ ನಕಲಿಯಾಗಿ ಸಂ.ಆಇ/ಸೇನಿ/08/2026 ದಿನಾಂಕ : 24-03-2026 ಸಂಖ್ಯೆಯಲ್ಲಿ ಅನಧಿಕೃತವಾಗಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಲ್ಲಿ ಹರಿಬಿಟ್ಟಿರುವುದು ಕಂಡು ಬಂದಿದೆ. 

ಕೆಲವು ಮಾಧ್ಯಮಗಳು, ಆನ್ ಲೈನ್ ಆವೃತ್ತಿಗಳು ಹಾಗೂ ಸಾಮಾಜಿಕ ಮಾಧ್ಯಮಗಳು ನೈಜತೆ ಪರಿಶೀಲಿಸದೆ ಈ ಸುದ್ದಿಯನ್ನು ಪ್ರಕಟಿಸಿವೆ. ಸರ್ಕಾರದ ಇಂತಹ ಯಾವುದೇ ಆದೇಶ ಅಥವಾ ಅಧಿಕೃತ ಜ್ಞಾಪನ ಪತ್ರ ಹೊರಡಿಸಿಲ್ಲ. ಈ ನಕಲಿ ಜ್ಞಾಪನ ಪತ್ರ ಅಧಿಕೃತವಲ್ಲ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ರಾಜಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆ ಮುಂದುವರಿಸುವ ಬಗ್ಗೆ ಸರಕಾರ ಯಾವುದೇ ಆದೇಶ ಹೊರಡಿಸಿಲ್ಲ : ಆರ್ಥಿಕ ಇಲಾಖೆ ಸ್ಪಷ್ಟನೆ Rating: 5 Reviewed By: karavali Times
Scroll to Top