ಮಂಗಳೂರು, ಎಪ್ರಿಲ್ 01, 2026 (ಕರಾವಳಿ ಟೈಮ್ಸ್) : ಜನಗಣತಿಯ ಪೂರ್ವಭಾವಿಯಾಗಿ ಮನೆಗಣತಿ ಕಾರ್ಯಕ್ಕೆ ನಗರದಲ್ಲಿ ಎಪ್ರಿಲ್ 1 ರಂದು ಚಾಲನೆ ನೀಡಲಾಯಿತು. ನಗರದ ಬಾವುಟಗುಡ್ಡೆಯಲ್ಲಿರುವ ಸ್ಪೀಕರ್ ಯು ಟಿ ಖಾದರ್ ಅವರ ನಿವಾಸದಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತು ಗಣತಿದಾರರು ಆಗಮಿಸಿ ಮಾಹಿತಿ ಪಡೆದರು.
ಮನೆ ಮಾಹಿತಿಯನ್ನು ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ದಾಖಲಿಸಲಾಯಿತು. ಈ ಸಂದರ್ಭ ಮಾತನಾಡಿದ ಸ್ಪೀಕರ್ ಅವರು, ಜನಗಣತಿಯು ದೇಶದ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ದೇಶದ ಪ್ರತಿಯೊಂದು ಮನೆ ಮತ್ತು ನಾಗರಿಕರ ಮಾಹಿತಿ ಒಳಗೊಳ್ಳಲಿದೆ. ದೇಶದ ಅಭಿವೃದ್ಧಿಗೆ ಈ ಮಾಹಿತಿ ಅತ್ಯಗತ್ಯವಾಗಿದೆ. ನಾಗರಿಕರು ಸ್ವಯಂ ಆಗಿ ಆನ್ ಲೈನಿನಲ್ಲಿ ತಮ್ಮ ಮನೆಯ ಮಾಹಿತಿ ದಾಖಲಿಸಬಹುದು ಅಥವಾ ಗಣತಿದಾರರು ಮನೆಗೆ ಬಂದಾಗ ಮಾಹಿತಿ ನೀಡಿ ಸಹಕರಿಸಬೇಕು ಎಂದರು.












0 comments:
Post a Comment