ಹಜ್ ಯಾತ್ರಾರ್ಥಿಗಳು ಪೂರ್ಣವಾಗಿ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು : ಸಯ್ಯಿದ್ ಅಶ್ರಫ್ ತಂಙಳ್ - Karavali Times ಹಜ್ ಯಾತ್ರಾರ್ಥಿಗಳು ಪೂರ್ಣವಾಗಿ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು : ಸಯ್ಯಿದ್ ಅಶ್ರಫ್ ತಂಙಳ್ - Karavali Times

728x90

31 March 2026

ಹಜ್ ಯಾತ್ರಾರ್ಥಿಗಳು ಪೂರ್ಣವಾಗಿ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು : ಸಯ್ಯಿದ್ ಅಶ್ರಫ್ ತಂಙಳ್

ನೇರಳಕಟ್ಟೆಯಲ್ಲಿ ಹಜ್ ತರಬೇತಿ ಶಿಬಿರ


ಬಂಟ್ವಾಳ, ಮಾರ್ಚ್ 31, 2026 (ಕರಾವಳಿ ಟೈಮ್ಸ್) : ಹಜ್ ನಿರ್ವಹಣಾ ಸಮಿತಿ ಮಂಗಳೂರು, ಸಿಟಿ ಗೋಲ್ಡ್ ಪುತ್ತೂರು, ಹೆಲ್ಪ್ ಲೈನ್ ಸರ್ವಿಸ್ ಪುತ್ತೂರು ಹಾಗೂ ಗಲ್ಫ್ ಟೂರ್ಸ್ ಆಂಡ್ ಟ್ರಾವೆಲ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಜ್ ತರಬೇತಿ ಶಿಬಿರವು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ಮಾ 31 ರಂದು ಬುಧವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಯ್ಯಿದ್ ಅಶ್ರಫ್ ತಂಙಳ್ ಮಾತನಾಡಿ, ಹಜ್ಜ್, ಉಮ್ರಾ ಯಾತ್ರಾರ್ಥಿಗಳು ನಿಸ್ವಾರ್ಥತೆ, ತ್ಯಾಗ ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಪೂರ್ಣವಾಗಿ ಆರಾಧನೆಯಲ್ಲಿ  ತೊಡಗಿಸಿಕೊಳ್ಳಬೇಕು ಎಂದರು. 

ಹಜ್ಜ್, ಉಮ್ರಾದ ವಿಧಿ ವಿಧಾನಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ ಉಪ್ಪಿನಂಗಡಿ ಮಾಲೀಕುದ್ದೀನಾರ್ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ, ಪ್ರತಿಯೊಬ್ಬ ಮುಸ್ಲಿಂ ವಿಶ್ವಾಸಿ ತನ್ನ ಕಡ್ಡಾಯ ಕರ್ತವ್ಯವಾದ ಹಜ್ಜ್ ಮತ್ತು ಉಮ್ರಾವನ್ನು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ನೆರವೇರಿಸಬೇಕು. ಯಾತ್ರೆಯುದ್ದಕ್ಕೂ ಸಹನೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವುದು ಕೂಡ ಅತ್ಯಂತ ಮುಖ್ಯ. ಅದೇ ರೀತಿ ಹಜ್ಜ್ ನಿರ್ವಹಿಸಿದ ನಂತರವೂ ಅದರ ಪಾವಿತ್ರ್ಯತೆಯನ್ನು ಬದುಕು ಪೂರ್ತಿ ಮುಂದುವರಿಸಿಕೊಂಡು ಹೋಗುವ ಸಂಕಲ್ಪವನ್ನು ಪ್ರತಿಯೊಬ್ಬ ಯಾತ್ರಾರ್ಥಿಯೂ ಕೈಗೊಳ್ಳಬೇಕು ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದ ಕರೀಂ ಹಾಜಿ ಸಿಟಿ ಗೋಲ್ಡ್, ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರಿ ಮಾತನಾಡಿದರು.

ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ಸುಲೈಮಾನ್ ಹಾಜಿ ಗಲ್ಫ್ ಟೂರ್, ಫಝಲ್ ಹಾಜಿ ಹೆಲ್ಫ್ ಲೈನ್ ಪುತ್ತೂರು, ಅಬ್ದುಲ್ ಹಮೀದ್ ಕರಾವಳಿ, ಝುಬೈರ್ ದಾರಿಮಿ ಅಕ್ಕರಂಗಡಿ, ಇಬ್ರಾಹಿಂ ಕೊಣಾಜೆ, ಫಾರೂಕ್ ಕಿನ್ಯ, ಲತೀಫ್ ಹಾಜಿ ಬೋಳಿಯಾರ್, ಸಿಟಿ ಗೋಲ್ಡ್ ಮೆನೇಜರ್ ಶೌಕತ್ ಪುತ್ತೂರು, ಕೆ.ಬಿ. ಸಲೀಂ ಹಾಜಿ ಕುಕ್ಕರಬೆಟ್ಟು, ಅಹ್ಮದ್ ಹಾಜಿ ಕುಕ್ಕರಬೆಟ್ಟು, ಕೆ.ಬಿ. ಸಿರಾಜ್ ಮೊದಲಾದವರು ವೇದಿಕೆಯಲ್ಲಿ ಭಾಗವಹಿಸಿದ್ದರು.

ದ ಕ ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೆ ಎಂ ಎ ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಹಜ್ ಯಾತ್ರಾರ್ಥಿಗಳು ಪೂರ್ಣವಾಗಿ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು : ಸಯ್ಯಿದ್ ಅಶ್ರಫ್ ತಂಙಳ್ Rating: 5 Reviewed By: karavali Times
Scroll to Top